ಸುಳ್ಯ:ಕಳೆದ ಮೂರೂವರೆ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಸುಳ್ಯ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಭರವಸೆಯ ಆಶಾಕಿರಣವಾಗಿ ಮೂಡಿ ಬಂದ ಶಿಕ್ಷಣ ಸಂಸ್ಥೆ ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು. ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ನಿರಂತರ ಶೇ.100 ಫಲಿತಾಂಶ ದಾಖಲಿಸುತ್ತಿರುವ ಶಾರದಾ ಪದವಿ ಪೂರ್ವ ಕಾಲೇಜು ಇದೀಗ ಸಾಧನೆಯ ಹಾದಿಯಲ್ಲಿ ಮುನ್ನಡೆದು ಅತ್ಯುತ್ತಮ ಶಿಕ್ಷಣವನ್ನು ಧಾರೆಯೆರೆಯುತಿದೆ. ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನಲ್ಲಿ ದಾಖಲಾತಿ ಆರಂಭಗೊಂಡಿದ್ದು. ದಾಖಲಾತಿಗೆ ಹೆಚ್ಚಿನ
ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಉತ್ತಮ ಕಾಲೇಜು ಕಟ್ಟಡ, ತರಗತಿಗಳು, ಅನುಭವಿ ಮತ್ತು ಪರಿಣಿತ ಶಿಕ್ಷಕ ವರ್ಗ, ಉತ್ತಮ ಗ್ರಂಥಾಲಯ, ಲ್ಯಾಬ್ಗಳು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅತ್ಯುತ್ತಮ ವಾತಾವರಣವನ್ನು ಹೊಂದಿರುವ ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು. ಈ ಹಿಂದೆ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಕಾಲೇಜು ಎರಡು ವರ್ಷಗಳ ಹಿಂದೆ ಕೋ-ಎಜ್ಯುಕೇಷನ್ ಮಾದರಿ ಅಳವಡಿಸಿದ್ದು ಗಂಡು ಹಾಗೂ ಹೆಣ್ಣು ಮಕ್ಕಳು ಒಟ್ಟಾಗಿ ಕಲಿಯುವ ಮಿಕ್ಸಡ್ ಕಾಲೇಜಾಗಿ ಮಾರ್ಪಾಡಾಗಿದ್ದು ಗಂಡು ಹಾಗೂ ಹೆಣ್ಣು ಮಕ್ಕಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಬಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ, ವಾಣೀಜ್ಯ ಹಾಗೂ ಕಲಾ ಮೂರು ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿ ಅತ್ಯುತ್ತಮ ದಾಖಲೆ ಮಾಡಿದೆ. ಕಲಾವಿಭಾಗದಲ್ಲಿ 600ರಲ್ಲಿ 587 ಅಂಕ ಪಡೆದು ಹರ್ಷಿತಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾರದಾ ಪ್ರೌಢ ಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ ಶೇ.100 ಫಲಿತಾಂಶ ದಾಖಲಿಸಿದೆ.
ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ.)ಸುಳ್ಯ ಇದರ ಆಡಳಿತಕ್ಕೆ ಒಳಪಟ್ಟ ಸಂಸ್ಥೆ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು.1921ರಲ್ಲಿ ಆಸ್ತಿತ್ವಕ್ಕೆ ಬಂದ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘಕ್ಕೆ ಬಹುದೊಡ್ಡ ಇತಿಹಾಸವಿದೆ. ಪ್ರಾರಂಭದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ ಸಹಕಾರಿ ಯಾಗಿದ್ದು, ನಂತರದ ದಿನಗಳಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಹೆಗ್ಗಳಿಕೆಯಾಗಿದೆ. ಡಾ.ಕುರುಂಜಿ ವೆಂಕಟರಮಣ ಗೌಡ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರವನ್ನು 1986ರಲ್ಲಿ ಸಂಘದ ಆಶ್ರಯದಲ್ಲಿ ಸ್ಥಾಪಿಸಿದರು.

ಧನಂಜಯ ಅಡ್ಪಂಗಾಯ. ಅಧ್ಯಕ್ಷರು,ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವುದನ್ನು ಮನಗಂಡು ಅಮರ ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಸಮಾಜದ ಬಾಂಧವರೊಡನೆ ಚರ್ಚಿಸಿ ವಿದ್ಯಾರ್ಥಿನಿಯರಿಗಾಗಿಯೇ 1982ರಲ್ಲಿ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯನ್ನು ಸ್ಥಾಪಿಸಲು ಕಾರಣೀಭೂತರಾದರು.1991 ಜುಲೈ 9 ರಂದು ಹಳೆಯ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ ನೂತನ ಪಿಯುಸಿ ಕಾಲ ವಿಭಾಗ ಪ್ರಾರಂಭವಾಯಿತು. ಡಾ. ಕುರಂಜಿಯವರ ಕನಸಿನ ಕೂಸಾಗಿ ಶ್ರೀಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು ಉದಯಿಸಿತು.
ಡಾ.ಕುರುಂಜಿಯವರ ಬಳಿಕ ಒಂದು ವರ್ಷಗಳ ಕಾಲ ಡಾ.ಕೆ.ವಿ ಚಿದಾನಂದ ಅವರು ಸಂಸ್ಥೆಯನ್ನು ಮುನ್ನಡೆಸಿದರು.
2010ರಲ್ಲಿ ಧನಂಜಯ ಅಡ್ಡಂಗಾಯ ಅವರ ಅಧ್ಯಕ್ಷತೆಯಲ್ಲಿ ಹೊಸ ಆಡಳಿತ ಆ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಕಳೆದ 15 ವರ್ಷಗಳಿಂದ ಧನಂಜಯ ಅಡ್ಪಂಗಾಯ ಅವರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ.
ಆಡಳಿತ ಮಂಡಳಿ:
ಧನಂಜಯ ಅಡ್ಪಂಗಾಯ ಅವರು ಅಧ್ಯಕ್ಷರಾಗಿ, ಡಾ ರೇವತಿ ನಂದನ್ ಅವರು ಪ್ರಧಾನ ಕಾರ್ಯದರ್ಶಿಯಾಗಿ, ಮಾಧವ ಗೌಡ ಕಾಮಧೇನು ಖಜಾಂಜಿಯಾಗಿ, ಯು.ಪಿ.ರಾಮಕೃಷ್ಣ ಮತ್ತು ಮಾಧವ ಗೌಡ ಎ.ಆರ್. ಉಪಾಧ್ಯಕ್ಷರಾಗಿ, ಲೋಕೇಶ್ವರಿ ವಿನಯಚಂದ್ರ ಮತ್ತು ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಜತೆಕಾರ್ಯದರ್ಶಿಯಾಗಿ ಮತ್ತು ಎಲ್ಲಾ ನಿರ್ದೇಶಕರುಗಳು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ.
ಆರಂಭದಲ್ಲಿ ಕಮಲಾ ಬಾಲಚಂದ್ರ ಅವರು ಪ್ರಾಂಶುಪಾಲರಾಗಿ ಹಾಗೂ 5 ಜನ ಉಪನ್ಯಾಸಕರು ಮತ್ತು 16 ವಿದ್ಯಾರ್ಥಿನಿಯರೊಂದಿಗೆ ಕಲಾ ವಿಭಾಗ ಪ್ರಾರಂಭವಾಯಿತು. ಬಳಿಕ ಬೆಳವಣಿಗೆ ಹೊಂದಿ 2001ರಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿದರು. ಧನಂಜಯ ಅಡ್ಪಂಗಾಯ ಅವರು ಅಧ್ಯಕ್ಷರಾದ ಬಳಿಕ ವಾಣಿಜ್ಯ ವಿಭಾಗ ತೆರೆದರು. ಬಳಿಕ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡಿತು.
2009ರಲ್ಲಿ ‘ಎ’ ಗ್ರೇಡ್ ಮಾನ್ಯತೆಯೊಂದಿಗೆ ಸರಕಾರದ ಅನುದಾನವನ್ನು ಪಡೆದುಕೊಂಡು ಬಳಿಕ ದಯಾಮಣಿ ಕೆ. ಅವರು ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ವಿಜ್ಞಾನ, ವಾಣೀಜ್ಯ, ಕಲಾ ವಿಭಾಗ ಇದ್ದು ಶೇ.100 ಫಲಿತಾಂಶ ದಾಖಲಿಸಿಕೊಂಡು ಬರುತ್ತಿದೆ.

ರಾಜ್ಯ ಮಟ್ಟದಲ್ಲಿ ಸಾಧನೆ: ವಿದ್ಯಾರ್ಥಿನಿಯರ ಸಾಧನೆಯನ್ನು ಅವವಲೋಕನ ಮಾಡಿದಾಗಿ ಶೈಕ್ಷಣಿಕ, ಸಾಂಸಕೃತಿಕ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಲಿಪಿಶ್ರೀ ಮತ್ತು ಅನುಷ್ಯ ಕಲಾ ವಿಭಾಗದಲ್ಲಿ ರಾಜ್ಯಮಟ್ಟದ ರ್ಯಾಂಕ್ ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಬ್ಯಾಡ್ಮಿಂಟನ್ ಮತ್ತು ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಈ ಎಲ್ಲಾ ಸಾಧನೆಗಳ ಹಿಂದೆ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಬೋಧಕ ಹಾಗೂ ಬೋಧಕೇತರ ವೃಂದದವರು ತಮ್ಮ ಅನುಭವ ಹಾಗೂ ಕಾಳಜಿಯನ್ನು ಧಾರೆಯೆರೆದು ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರೀತಿ, ಗಟ್ಟಿತನ, ಮಾನವೀಯ ಗುಣವನ್ನು ಬೆಳೆಸಿಕೊಳ್ಳಲು ದಾರಿದೀಪವಾಗಿದ್ದಾರೆ. ಸವಾಲುಗಳನ್ನು ಎದುರಿಸಿ ನಿಲ್ಲುವ ಕ್ಷಮತೆ, ಗುರುಹಿರಿಯರನ್ನು ಪ್ರೀತಿಸುವ, ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗ ದರ್ಶನ ಸಂಸ್ಥೆಯು ಸದಾ ನೀಡುತ್ತಾ ಬಂದಿದೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗ(ಪಿಸಿಎಂಬಿ), ವಾಣೀಜ್ಯ ವಿಭಾಗ(ಹೆಚ್ಇಬಿಎ), ಕಲಾವಿಭಾಗದಲ್ಲಿ (ಎಚ್ಇಪಿಎಸ್) ದಾಖಲಾತಿ ನಡೆಯುತಿದೆ. ಜೂ.2ರಂದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಳ್ಳಲಿದೆ.