ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ, ವಾಣೀಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 76 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 31, ವಾಣೀಜ್ಯ ವಿಭಾಗದಲ್ಲಿ 22 ಹಾಗೂ

ಹರ್ಷಿತಾ,ಸುಶ್ಮಿತಾ,ವಿದ್ಯಾಕುಮಾರಿ
ಕಲಾ ವಿಭಾಗದಲ್ಲಿ 23 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾದರು. ವಿಜ್ಞಾನ ವಿಭಾಗದಲ್ಲಿ 3 ಡಿಸ್ಟಿಂಕ್ಷನ್ 26 ಮಂದಿ ಪ್ರಥಮ ಶ್ರೇಣಿ, ವಾಣೀಜ್ಯ ವಿಭಾಗದಲ್ಲಿ 6 ಮಂದಿ ಡಿಸ್ಟಿಂಕ್ಷನ್ 15 ಮಂದಿ ಪ್ರಥಮ ಶ್ರೇಣಿಯಲ್ಲಿ, ಹಾಗೂ ಕಲಾ ವಿಭಾಗದಲ್ಲಿ 5 ಮಂದಿ ಡಿಸ್ಟಿಂಕ್ಷನ್ 14 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ವಿಜ್ಞಾನ ವಿಭಾಗದಲ್ಲಿ ವಿದ್ಯಾಕುಮಾರಿ(600 ರಲ್ಲಿ 531), ವಿನುತಾ(521), ದೀಕ್ಷಿತಾ (517) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ವಾಣೀಜ್ಯ ವಿಭಾಗದಲ್ಲಿ ಸುಶ್ಮಿತಾ ಜಿ(565), ಸುವರ್ಣ(546), ಮೇಘನಾ(532), ಬೃಂದಶ್ರೀ(521), ಸಲ್ಮಾ ರಿಫಾ(518) ಹಾಗೂ ಫಾತಿಮಾತ್ ಶಿಫಾನ(512) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಕಲಾವಿಭಾಗದಲ್ಲಿ ಹರ್ಷಿತಾ(587) ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾಗ್ಯಶ್ರೀ(567), ರೇತಿಕಾ. ಸಿ(564), ವಂದಿತಾ ಎಂ.(527), ಅಕ್ಷಯ ಸರಸ್ವತಿ(517) ಅತೀ ಹೆಚ್ಚು ಅಂಕ ಪಡೆದಿದ್ದಾರೆ.