ಸುಳ್ಯ: ಕಳೆದ ಒಂದು ದಶಕದಿಂದ ಸುಳ್ಯದ ಜನತೆಗೆ ಸ್ವಾದಿಷ್ಟ ಮತ್ತು ವರೈಟಿ ಖಾದ್ಯಗಳನ್ನು ಉಣಬಡಿಸಿ ಗ್ರಾಹಕರಿಗೆ ತೃಪ್ತಿ ನೀಡುತ್ತಿರುವ ಸುಳ್ಯ ಹಳೆಗೇಟಿನ ಹೋಟೆಲ್ ಸಂತೃಪ್ತಿಯಲ್ಲಿ ಸಂಭ್ರಮ.
ಇದೀಗ ನಾಡಿಗೆ ಓಣಂ ಸಂಭ್ರಮ. ದೇಶದೆಲ್ಲೆಡೆ ಆಚರಿಸುವ ಸಂಭ್ರಮ ಸಡಗರದ ಹಬ್ಬ ಓಣಂ. ಜನರ ಸಂಭ್ರಮಕ್ಕೆ ಸಾಥ್ ನೀಡುತಿದೆ ಹೋಟೆಲ್ ಸಂತೃಪ್ತಿ. ಓಣಂ ಪ್ರಯುಕ್ತ ಎರಡು ದಿನಗಳ ಕಾಲ ಅಂದರೆ
ಸೆ.16 ಮತ್ತು 17 ರಂದು ಸಂತೃಪ್ತಿಯಲ್ಲಿ ಓಣಂ ಸದ್ಯ ಆರಂಭಗೊಂಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯ ತನಕ ಹೋಟೆಲ್ನಲ್ಲಿ ಓಣಂ ಸದ್ಯ ಇರಲಿದೆ. ಕಳೆದ 10 ವರ್ಷಗಳಿಂದ ಸಂತೃಪ್ತಿಯಲ್ಲಿ ಓಣಂ ಸದ್ಯ ಏರ್ಪಡಿಸಲಾಗಿತ್ತು. ಸುಮಾರು 30 ಕ್ಕೂ ಅಧಿಕ ವೈವಿಧ್ಯಮಯ ಊಟ ಓಣಂ ಸದ್ಯ. ಕೇರಳದ ಓಣಂ ಹಬ್ಬಕ್ಕೆ ಬಡಿಸಲಾಗುವ ಎಲ್ಲಾ ಖಾದ್ಯಗಳನ್ನೂ ಬಡಿಸಲಾಗುತ್ತದೆ. ಅನ್ನ, ಸಾಂಬಾರ್, ಪಾಯಸ, ಅವಿಯಲ್, ಕೂಟುಕರಿ, ಪುಳಿಶ್ಯೇರಿ, ಪಲ್ಯಗಳು, ಹಪ್ಪಳ, ಬಾಳೆ ಹಣ್ಣು, ಶರ್ಕರ ವರಟ್ಟಿ, ಚಿಪ್ಸ್..ಹೀಗೆ ಓಣಂ ಸದ್ಯದಲ್ಲಿ ಎಲ್ಲಾ ಖಾದ್ಯಗಳನ್ನೂ ಬಡಿಸಲಾಗುತ್ತದೆ. ಬಾಳೆ ಎಲೆ ಹಾಕಿ ಸಾಂಪ್ರದಾಯಿಕವಾಗಿ ಸದ್ಯ ಬಡಿಸಲಾಗುತ್ತದೆ.
ಓಣಂ ಸದ್ಯ ತಯಾರಿಸಲು ವಿಶೇಷ ಪಾಕತಜ್ಞರನ್ನು ಕರೆ ತರಲಾಗುತ್ತದೆ. ಕಳೆದ 10 ವರ್ಷಗಳಿಂದಲೂ ಸುಳ್ಯದ ಸಂತೃಪ್ತಿಯಲ್ಲಿ ಓಣಂ ಸದ್ಯ ಬಡಿಸಲಾಗುತ್ತದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂತೃಪ್ತಿ ಹೋಟೆಲ್ನ ಮಾಲಕರಾದ ನವೀನ್ ಹೇಳುತ್ತಾರೆ. ಓಣಂ ಆಚರಿಸುವ ಮಂದಿ ಮಾತ್ರವಲ್ಲದೆ ಸುಳ್ಯದ ಬಹುತೇಕ ಮಂದಿ ಓಣಂ ಸದ್ಯ ಉಣ್ಣಲು ಬರುತ್ತಾರೆ. ಸುಳ್ಯ ಮಾತ್ರವಲ್ಲದೆ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಓಣಂ ಸದ್ಯ ಸವಿಯಲು ಆಗಮಿಸುತ್ತಾರೆ.
ಈ ಬಾರಿಯೂ ವಿಶೇಷ ಓಣಂ ಸದ್ಯದೊಂದಿಗೆ ಸಂತೃಪ್ತಿ ಓಣಂ ಸಂಭ್ರಮ ಹೆಚ್ಚಿಸಲು ಸಿದ್ಧವಾಗಿದೆ. ಹೋಟೆಲ್ನಲ್ಲಿ ಓಣಂ ಸದ್ಯ ನೀಡುವುದರ ಜೊತೆಗೆ ಮುಂಚಿತವಾಗಿ ಆರ್ಡರ್ ಮಾಡಿದರೆ ಪಾರ್ಸೆಲ್ ವ್ಯವಸ್ಥೆಯೂ ಇದೆ ಎನ್ನುತ್ತಾರೆ ನವೀನ್ ಅವರು.