ಸುಳ್ಯ:ಮರಳು ಮತ್ತು ಕೆಂಪು ಕಲ್ಲು ಪೂರೈಕೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ತಾಲೂಕಿನ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಮಿಕರ ಮತ್ತು ಸಾಮಗ್ರಿ ಪೂರೈಕೆದಾರರ ವಿವಿಧ ಸಂಘಟನೆಗಳ ಪ್ರಮುಖರ ಸಭೆ ಒತ್ತಾಯಿಸಿತು. ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ
ಪ್ರಮುಖರು ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ಸಭೆ ನಡೆಸಿ ಮರಳು ಮತ್ತು ಕೆಂಪು ಕಲ್ಲು ಪೂರೈಕೆಗಳಿಂದಾಗಿ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು.ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲು ಹಾಗೂ ಮರಳು ಮತ್ತು ಕೆಂಪು ಕಲ್ಲು ದೊರಕುವ ನಿಟ್ಟಿನಲ್ಲಿ ಸರಳ ಕಾನೂನು ರೂಪಿಸಲು ಸರಕಾರವನ್ನು ಒತ್ತಾಯಿಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಮುಖರಾದ ತೀರ್ಥಕುಮಾರ್ ಕುಂಚಡ್ಕ, ಸುಬೋಧ್ ಶೆಟ್ಟಿ ಮೇನಾಲ, ಕೃಷ್ಣರಾವ್ ಇಂಜಿನಿಯರ್, ಮಧುಸೂದನ್, ಕಿಟ್ಟಣ್ಣ ರೈ, ಪ್ರಕಾಶ್ ಅಡ್ಕಾರ್, ಗಿರೀಶ್ ನಾರ್ಕೋಡು, ಮನೋಹರ್, ಬಾಲಚಂದ್ರ ಅಡ್ಕಾರ್, ಚಂದ್ರಶೇಖರ್ ಪನ್ನೆ, ಅವಿನ್ಎಂ.ಹೆಚ್, ಸುಬ್ರಹ್ಮಣ್ಯ ಕರ್ಲಪ್ಪಾಡಿ, ಚೇತನ್ ಕನಕಮಜಲು, ರಾಕೇಶ್ ಮತ್ತಿತರರು ಭಾಗವಹಿಸಿದ್ದರು.