ಸುಳ್ಯ:ಸುಳ್ಯದ ಪ್ರಸಿದ್ಧ ಶುದ್ಧ ಸಸ್ಯಾಹಾರ ಹೋಟೆಲ್ ಸಂತೃಪ್ತಿ ರೆಸ್ಟೋರೆಂಟ್ ಗ್ರೂಪ್ನ ನೂತನ ಹೋಟೆಲ್ ಮೈಸೂರಿನ ಕುವೆಂಪು ನಗರ ಪಂಚಮಂತ್ರ ರಸ್ತೆಯಲ್ಲಿರುವ ಜೆಎಸ್ಎಸ್ ಲಾ ಕಾಲೇಜು ಕಾಂಪ್ಲೆಕ್ಸ್ನಲ್ಲಿ ಡಿ.6 ರಂದು ಶುಭಾರಂಭಗೊಂಡಿತು.
ಶುದ್ಧ ಸಸ್ಯಾಹಾರ ಆಹಾರ ನೀಡಿ ಉತ್ತಮ ಹೆಸರು ಗಳಿಸಿರುವ ಸಂತೃಪ್ತಿ ರೆಸ್ಟೋರೆಂಟ್ನ ನೂತನ
ಹೋಟೆಲ್ನ್ನು ಮೈಸೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಉದ್ಘಾಟನೆ ಮಾಡಿದರು. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಎಸ್ ಪ್ರಶಾಂತ್, ಮೈಸೂರು ಚೌಟ್ರಿ ಅಸೋಸಿಯೇಷನ್ ಅಧ್ಯಕ್ಷ ಸತ್ಯನಾರಾಯಣ, ಅರೋಹ ಹೋಟೆಲ್ ಪಾಲುದಾರರಾದ ಸಮರ್ಥ್ ವೈದ್ಯ, ಶಿವನಾಥ್ ರಾವ್ ಸುಳ್ಯ, ಕಿಶನ್ ಕಾವು ಅವಂತಿಕೆಫೆ, ರಜಿತ್ ಭಟ್ ಪಂಜ, ಕಾರ್ಪೊರೇಟ್ ಈವೆನ್ಟ್ಸ್& ಎಸ್ಟೇಟ್ ನ ನಿರ್ದೇಶಕ ಶಿವ ಪ್ರಸಾದ್ ಪಿ ಎಸ್, ನ್ಯಾಯವಾದಿ ಜಯಪ್ರಸಾದ್ ,ಎಂ.ಕೆ ಸತೀಶ್ ಸುಳ್ಯ, ನಿವೃತ್ತ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ಗೌಡ, ಹೊಟೇಲ್ ಕನ್ಸಲ್ಟೆಂಟ್ ಮರಳಿಧರ ಮೊದಲಾದ ಉಪಸ್ಥಿತರಿದ್ದರು. ಸಂತೃಪ್ತಿ ಗ್ರೂಪ್ ಮಾಲಕ ನವೀನ್ ಕುಮಾರ್ ಹಾಗೂ ಶ್ರೀಮತಿ ಕೀರ್ತನ ನವೀನ್ ಸರ್ವರನ್ನೂ ಸ್ವಾಗತಿಸಿ ಬರಮಾಡಿಕೊಂಡರು.