ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ವತಿಯಿಂದ ಅರೋಗ್ಯ ತಪಾಸಣಾ ಶಿಬಿರ ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಉದ್ಘಾಟಿಸಿದರು.ಮಾಜಿ
ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಸದಸ್ಯರಾದ ವಿಜಯ ಕುಮಾರ್, ವಿಮಲಾ ಪ್ರಸಾದ್ ಉಪಸ್ತಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆಯ ಹರ್ಷಿತಾ ಕುಮಾರಿ, ಚೈತ್ರಾ ಭಾಗೀರಥಿ, ಪುಷ್ಪಲತಾ. ಆಶಾ ಕಾರ್ಯಕರ್ತೆಯರಾದ, ಮೋಹನಾಗಿ, ಆಶಾ ವಿನಯ್, ಸೌಮ್ಯ, ಪ್ರೇಮಲತಾ ವೈದ್ಯಾಧಿಕಾರಿಗಳು ಇದ್ದರು. ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು.