ಮೈಸೂರು:ಉದ್ಯೋಗ, ಶೈಕ್ಷಣಿಕ, ಸಾಂಸ್ಕೃತಿಕ ,ಕನ್ನಡ ನಾಡು ನುಡಿ, ಜಲ-ನೆಲದ ಹಾಗೂ ವಿವಿಧ ರಂಗಗಳಲ್ಲಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ಲೀ ರುಚಿಯಲ್ಲಿ ‘ಮಾನವ ಸಂಪನ್ಮೂಲ ನಾವೀನ್ಯ ನಾಯಕರು – ಕೌಶಲ್ಯ ಹಾಗೂ ತಂತ್ರಜ್ಞಾನ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಸರಿ ಸುಮಾರು
40ಕ್ಕೂ ಹೆಚ್ಚು ಶಿಭಿರಾರ್ಥಿಗಳು ಭಾಗವಹಿಸಿದ್ದರು. ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಡಾ. ಅನಂತ ಗೌಡ ಅವರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಸ್ಪರ್ಧಾತ್ಮಕ ಜಗತ್ತಿನ ಈ ದಿನಗಳಲ್ಲಿ ಯುವ ಪೀಳಿಗೆಯು ಕಲಿಕೆಯ ಮುಖಾಂತರ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಮತ್ತು ಸಜ್ಜನ ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ನಂಜನಗೂಡಿನ ಜುಬ್ಲಿಯೆಂಟ್ ಫರ್ಮೋವ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಸುಬ್ರಹ್ಮಣ್ಯ ತರಬೇತಿಯ ಕುರಿತು ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಅಲಿಯನ್ಸ್ ಮೆಕಾಟ್ರಾನಿಕ್ಸ್ ಪ್ರವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಸುದೇಶ್ಕರ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಾದೇಶಿಕ ಕಚೇರಿ ಮೈಸೂರು ವಿಭಾಗದ ಮೇಲ್ವಿಚಾರಕರಾದ ಸಂದೀಪ್ ಬಿ ಸಿ, ಮೈಸೂರಿನ ದೇವಾಶ್ಯ ಲಾ ಅಸೋಸಿಯೇಟ್ಸ್ ಇದರ ಅಡ್ವಕೇಟ್ ವಿಶ್ವನಾಥ್ ದೇವಶ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಫಾರ್ಮಡ್ ಲಿಮಿಟೆಡ್ನ ಖ್ಯಾತ ಶತರಬೇತುದಾರರು ಹಾಗೂ ತರಬೇತಿ ವಿಭಾಗದ ಸಹಾಯಕ ಉಪಾಧ್ಯಕ್ಷರಾದ ವಿಕ್ರಂ ಸಾಗರ್ ಸಕ್ಸೇನಾ ಕಾರ್ಯಾಗಾರದ ತರಬೇತಿಯನ್ನು ನೀಡಿದರು. ಕ್ರಸೇಂಟ್ ಕನ್ಸಲ್ಟೆಂಟ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಇಸ್ಮಾಯಿಲ್ ಜಾರ ವರು ಸ್ವಾಗತಿಸಿದರು. ಬಿಈಎಂಎಲ್ ಲಿಮಿಟೆಡ್ ಇದರ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಆಸಿಫ್ ಇಕ್ಬಾಲ್ ಎಲಿಮಲೆ ನಿರೂಪಿಸಿದರು. ಸಜ್ಜನ ಪ್ರತಿಷ್ಠಾನದ ನಿರ್ದೇಶಕರುಗಳಾದ ತಾಜುದ್ದೀನ್ ಉಬೈದು, ಶಶಿಕಾಂತ್ ಬೆಡಸೂರು, ಮಂಜುನಾಥ್ ಹಿರಿಯೂರು ಮತ್ತಿತರರು ಭಾಗವಹಿಸಿದ್ದರು