ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಂಡಲ ಮಹೋತ್ಸವಕ್ಕಾಗಿ ಕ್ಷೇತ್ರದ ಬಾಗಿಲು ಶುಕ್ರವಾರ ಸಂಜೆ ತೆರೆಯಲಾಯಿತು.
ಶ್ರೀ ಕ್ಷೇತ್ರದ ತಂತ್ರಿ ಕಂಠರರ್ ರಾಜೀವರ್ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪಿ.ಎನ್.ಮಹೇಶ್ ನಂಬೂದಿರಿ ಅವರು ಗರ್ಭಗುಡಿಯ ಬಾಗಿಲು ತೆರೆದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ
ಶಬರಿಮಲೆ ಪ್ರಧಾನ ಅರ್ಚಕರಾಗಿ ಅರುಣ್ ಕುಮಾರ್ ಹಾಗೂ ಮಾಳಿಗಪುರಂ ಕ್ಷೇತ್ರದ ನೂತನ ಪ್ರಧಾನ ಅರ್ಚಕರಾಗಿ ವಾಸುದೇವನ್ ನಂಬೂದಿರಿ ಜವಾಬ್ದಾರಿ ವಹಿಸಿಕೊಂಡರು.
ಶಬರಿಮಲೆ ದೇವಸ್ಥಾನವು ಪ್ರತಿವರ್ಷ ಮಂಡಲ ಪೂಜೆಗಾಗಿ ತೆರೆಯುತ್ತದೆ. ಇಂದಿನಿಂದ ವಾರ್ಷಿಕ ತೀರ್ಥಯಾತ್ರೆಯ ಭಾಗವಾದ ಮಂಡಲಪೂಜೆ ಪ್ರಾರಂಭವಾಗಿದೆ. ಶಬರಿಮಲೆಯ ಅಯ್ಯಪ್ಪ ದೇವಾಲಯವು ಮಂಡಲ-ಮಕರವಿಳಕ್ಕು ಋತುವಿಗೆ ತೆರೆಯಲಾಗಿದೆ.
ಸಂಜೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ವರ್ಚುವಲ್ ಕ್ಯೂ ಬುಕಿಂಗ್ ಸೌಲಭ್ಯವು ಈಗ ಲಭ್ಯವಿದೆ.