ಬೆಂಗಳೂರು:ಸಂಜು ಸಾಮ್ಸನ್ ಹಾಗೂ ರಿಯಾನ್ ಪರಾಗ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಆ ಮೂಲಕ ಗುಜರಾತ್ ಟೈಟನ್ಸ್ಗೆ 197ರ ಗುರಿಯನ್ನು ನೀಡಿದೆ.
ಸಂಜು ಸ್ಯಾಮ್ಸನ್ 38 ಎಸತಗಳಲ್ಲಿ
2 ಸಿಕ್ಸರ್ ಹಾಗೂ 7 ಬೌಂಡ್ರಿ ಸಹಿತ ಅಜೇಯ 68 ರನ್ ಸಿಡಿಸಿದರು. ರಿಯಾನ್ ಪರಾಗ್ ಅವರು 48 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡ್ರಿ ಸಹಿತ 76 ರನ್ ಪೇರಿಸಿ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ ಐದು ಬೌಂಡ್ರಿ ಮೂಲಕ 24 ರನ್ ಕಲೆಹಾಕಿದರು.ಜೋಸ್ ಬಟ್ಲರ್ ಅವರಿಗೆ 10 ಎಸೆತಗಳಲ್ಲಿ 8 ರನ್ ಗಳಿಸಿದರು. ಸ್ಯಾಮ್ಸನ್ ಹಾಗೂ ರಿಯಾನ್ ಸಿಕ್ಸರ್, ಬೌಂಡರಿ ಸಿಡಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿ 130 ರನ್ಗಳ ಜತೆಯಾಟ ಕಟ್ಟಿದರು. ಶಿಮ್ರನ್ ಹಿಟ್ಮೆಯರ್ ಅವರು 5 ಎಸೆತಗಳಿಗೆ ವೇಗದ 13 ರನ್ ಗಳಿಸಿ ತಂಡದ ಮೊತ್ತ 196 ರನ್ಗೆ ತಂದರು.