ಜೈಪುರ: ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 100 ರನ್ಗಳಿಂದ ಸೋಲಿಸಿತು. ಇದರಿಂದ ರಾಯಲ್ಸ್ ಪ್ಲೇಆಫ್ ಕಾಣದೇ ಟೂರ್ನಿಯಿಂದ ಹೊರ ಬಿದ್ದಿತು.
ಮುಂಬೈ ಇಂಡಿಯನ್ಸ್ ಸತತ ಆರನೇ
ಗೆಲುವನ್ನು ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂಬೈ 11 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಪಡೆದಿದೆ. 10 ಪಂದ್ಯದಲ್ಲಿ 7 ಜಯ ದಾಖಲಿಸಿ 14 ಅಂಕ ಪಡೆದ ಆರ್ಸಿಬಿ ಎರಡನೇ ಸ್ಥಾನದಲ್ಲಿದೆ. ರನ್ ರೇಟ್ ಆಧಾರದಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ.
11 ಪಂದ್ಯಗಳನ್ನು ಆಡಿದ ರಾಯಲ್ಸ್ಗೆ ಎಂಟನೇ ಸೋಲಾಗಿದೆ.6 ಅಂಕ ಪಡೆದಿರುವ ರಾಯಲ್ಸ್ 8ನೇ ಸ್ಥಾನದಲ್ಲಿದೆ.
ಮುಂಬೈ, ಆರ್ಸಿಬಿ ತಂಡಕ್ಕೆಇನ್ನೊಂದು ಗೆಲುವು ಪ್ಲೇ ಆಫ್ ಬಾಗಿಲು ತೆರೆಯಬಹುದು. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರ ಬಿದ್ದಿದೆ.