ಜೈಪುರ: ಯಶಸ್ವಿ ಜೈಸ್ವಾಲ್ ಅಮೋಘ ಶತಕದ (ಔಟಾಗದೇ 104, 60ಎ) ಹಾಗೂ ಸಂದೀಪ್ ಶರ್ಮಾ (18ಕ್ಕೆ5) ಅವರ ಭರ್ಜರಿ ಬೌಲಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 9 ವಿಕೆಟ್ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ಗೆ 179 ರನ್ ಗಳಿಸಿತು. ಉತ್ತರವಾಗಿ
ರಾಜಸ್ಥಾನ ರಾಯಲ್ಸ್ ಎಂಟು ಎಸೆತಗಳು ಉಳಿದಿರುವಂತೆ 1 ವಿಕೆಟ್ಗೆ 183ರನ್ ಬಾರಿಸಿ ಜಯಗಳಿಸಿತು. ಯಶಸ್ವಿ ಜೈಸ್ವಾಲ್ 60 ಎಸೆತಗಳಲ್ಲಿ 9 ಬೌಂಡರಿಗಳ ಮತ್ತು ಏಳು ಸಿಕ್ಸರ್ಗಳನ್ನು ಸಿಡಿಸಿ ಅಜೇಯ 104 ರನ್ ಗಳಿಸಿದರು.
ಜೋಸ್ ಬಟ್ಲರ್ (35, 25ಎ) ನಾಯಕ ಸಂಜು ಸ್ಯಾಮ್ಸನ್ (ಔಟಾಗದೇ 38, 28ಎ) ಉತ್ತಮ ಕಾಣಿಕೆ ನೀಡಿದರು. ಜೈಸ್ವಾಲ್ ಹಾಗೂ ಸಂಜು ಮುರಿಯದ ಎರಡನೇ ವಿಕೆಟ್ಗೆ 109 ರನ್ ಸೇರಿಸಿದರು. ಮಧ್ಯಮ ವೇಗಿ ಸಂದೀಪ್ ಶರ್ಮಾ ಮೊದಲ ಸಲ ಐಪಿಎಲ್ನಲ್ಲಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಸಂದೀಪ್, ಎರಡನೇ ಸ್ಪೆಲ್ನ ಅಂತಿಮ ಓವರ್ನಲ್ಲಿ 3 ವಿಕೆಟ್ ಪಡೆದರು.ಮುಂಬೈ ತಂಡಕ್ಕೆ ಎಡಗೈ ಬ್ಯಾಟರ್ ತಿಲಕ್ ವರ್ಮಾ (65, 45ಎ, 4×4, 6×3) ಮತ್ತು ನೇಹಲ್ ವಢೇರಾ (49, 24, 4×3, 6×4) ಅವರ 99 ರನ್ಗಳ ಜೊತೆಯಾಟ ಅಸರೆಯಾಯಿತು.