ಕಲ್ಲಪಳ್ಳಿ: ತೀವ್ರಗೊಂಡಿರುವ ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸೋಲಾರ್ ಬೇಲಿ ಅಳವಡಿಸುವ ಕುರಿತು ಚರ್ಚಿಸಲು ಕಲ್ಲಪಳ್ಳಿಯ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಕಲ್ಲಪಳ್ಳಿ ಪೆರುಮುಂಡದ ಆದರ್ಶ ಸಭಾಂಗಣದಲ್ಲಿ ನಡೆಯಿತು.ಸೋಲಾರ್ ಬೇಲಿ ನಿರ್ಮಿಸಲು ಸಾರ್ವಜನಿಕರ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ
ಡಿಎಫ್ಒ ಜೋಸೆಫ್ ಮ್ಯಾಥ್ಯೂ, ಮಾರ್ಗದರ್ಶನದಲ್ಲಿ ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಘುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ರೇಂಜ್ ಫಾರೆಸ್ಟ್ ಆಫೀಸರ್ ರಾಹುಲ್.ಕೆ, ಪನತ್ತಡಿ ಪಂಚಾಯತ್ ಸದಸ್ಯರಾದ ವೇಣುಗೋಪಾಲ್ ಕೆ. ಕೆ, ಶಿಬು ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಸದಸ್ಯೆ ಭವ್ಯ ಜಯರಾಜ್ ಸ್ವಾಗತಿಸಿ, ಕಲ್ಲಪ್ಪಳ್ಳಿ ವನಸಂರಕ್ಷಣ ಸಮಿತಿಯ ಸದಸ್ಯ ದಾಮೋದರ ಪಿ. ಡಿ ಪ್ರಸ್ತಾವಿಕವಾಗಿ ಮಾತಾಡಿದರು.ಕಲ್ಲಪ್ಪಳ್ಳಿ ವನಸoರಕ್ಷಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ನಡುಮುಟ್ಲು ವಂದಿಸಿದರು.
ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖೆ ತೆಗೆದುಕೊಂಡಿರುವ ವಿವಿ್ ಕಾರ್ಯಕ್ರಮಗಳು,ಬೇಲಿ ನಿರ್ಮಾಣ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸೋಲಾರ್ ಬೇಲಿ ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು. 30 ಮಂದಿಯ ಸಮಿತಿ ರಚಿಸಲಾಯಿತು. ಮುಂದಿನ ಹಂತದಲ್ಲಿ ಅರಣ್ಯ ಇಲಾಖೆ ಮತ್ತು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು.
ಮಾಂಬಳದಿಂದ ಕಮ್ಮಾಡಿ ತನಕ ಸೋಲಾರ್ ಬೇಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಪ್ರದೇಶದ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು. ಜು.25ರಿಂದ 27ರ ತನಕ ಸಮೀಕ್ಷೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಲು ವಿನಂತಿಸಲಾಯಿತು. ಪ್ರಮಖರು, ಕೃಷಿಕರು, ಸಾರ್ವಜನಿಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.







