ಸುಳ್ಯ: ಸುಳ್ಯ ರೋಟರಿ ಕ್ಲಬ್ ರೋಟರಿ ಸುಳ್ಯ ಸಿಟಿ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಆಟಿ ಸಂಭ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಸುಳ್ಯದ ರೋಟರಿ ಹಾಲ್ನಲ್ಲಿ ನಡೆಯಿತು.’ಸಂಪ್ರದಾಯದ ಸಿಹಿ, ಬಾಂಧವ್ಯದ ಸವಿ’ ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ
ಪುರುಷೋತ್ತಮ ಕಿರ್ಲಾಯ ಆಟಿ ಆಚರಣೆ ಕುರಿತು ಮಾತನಾಡಿದರು. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಲೋಕೇಶ್ ಪೆರ್ಲಂಪಾಡಿ ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್ ಸ್ವಾಗತಿಸಿ, ಕಾರ್ಯದರ್ಶಿ ಹರಿರಾಯ ಕಾಮತ್ ವರದಿ ವಾಚಿಸಿದರು.ಸ್ಮಿತಾ ಹರ್ಷವರ್ಧನ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರಾಗೇಶ್ ರಾಘವ್, ಕಾರ್ಯದರ್ಶಿ ಪುರಂದರ ರೈ, ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಝೋನಲ್ ಲೆಫ್ಟಿನೆಂಟ್ ಗಿರೀಶ್ ನಾರ್ಕೋಡು, ಇನ್ನರ್ವೀಲ್ ಅಧ್ಯಕ್ಷೆ ಪ್ರಜ್ಞಾ ಎಂ.ಆರ್ ಮತ್ತಿತರರು ಉಪಸ್ಥಿತರಿದ್ದರು.









