ಸುಳ್ಯ:ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಬೆಳ್ಳಿಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ” ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ” ಎಂಬ ವಿಶೇಷ ಜಾಥಾ, ಉಚಿತ ಆರೋಗ್ಯ ತಪಾಸಣೆ, ರಾಜ್ಯ ಮಟ್ಟದ ಕಾನ್ನರೆನ್ಸ್ ಮಿಡ್ ಕಾನ್ – 2026 ಕಾರ್ಯಕ್ರಮವು
ಆ.7, 8 ಮತ್ತು 9ರಂದು ನಡೆಯಲಿದೆ ಎಂದು ಎಒಎಲ್ಇ ಅಧ್ಯಕ್ಷ ಡಾ. ಕೆವಿ ಚಿದಾನಂದ, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಗೋಪಿನಾಥ್ ತಿಳಿಸಿದ್ದಾರೆ. ಕೆವಿಜಿ ಮಡಿಕಲ್ ಕಾಲೇಜಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.ಆ. 7ರಂದು ಬೆಳಗ್ಗೆ 8 ಗಂಟೆಗೆ ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ ಜಾಥಾ ಕಾಲೇಜಿನಿಂದ ಹೊರಟು ಸುಳ್ಯ ನಗರದಲ್ಲಿ ನಡೆಯಲಿದೆ.ಬಳಿಕ ಬೆಳಿಗ್ಗೆ 10ರಿಂದ ‘ಡಯಾಬಿಟಿಕ್ ಫುಟ್ ಕ್ಯಾಂಪ್ ನಲ್ಲಿ ಡಯಾಬಿಟಿಸ್ ಇರುವವರ ಪಾದದ ವಿಶೇಷ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಆಗಸ್ಟ್ 8 ಮತ್ತು 9ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ, ಕರ್ನಾಟಕ ಶಸ್ತ್ರ ಚಿಕಿತ್ಸಾ ತಜ್ಞರ ಸಂಘದಿಂದ ಸುಳ್ಯದಲ್ಲಿ ಪ್ರಥಮ ಬಾರಿಗೆ ಮಿಡ್ ಕಾನ್ – 2026 ರಾಜ್ಯಮಟ್ಟದ ಕಾನ್ಸರೆನ್ಸ್ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಸ್ತ್ರೀರೋಗ ತಜ್ಞೆ ಡಾ. ಗೀತಾ ದೊಪ್ಪ
ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ. ರಂಜಿತ್, ಡಾ. ಸಾಯಿಗೀತಾ ಉಪಸ್ಥಿತರಿದ್ದರು.









