ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ-ನಾವುರು ಭಾಗದಲ್ಲಿ ನಗರ ಪಂಚಾಯತ್ ರಸ್ತೆ ಬದಿ, ಸಾರ್ವಜನಿಕ ಪ್ರದೇಶದ ಕಾಡು ಕಡಿಯದೆ ಹಾವುಗಳ ಆವಾಸ ಕೇಂದ್ರ ಆಗುತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ
ಕಾಡು ಕಡಿಯದೆ, ಚರಂಡಿ ರಿಪೇರಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಈ ರಸ್ತೆಯು ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಕಾಡು ತುಂಬಿದೆ.ಆ ಕಾಡಿನಲ್ಲಿ, ವಿವಿಧ ಹಾವುಗಳು, ವಿಷಜಂತುಗಳು ತುಂಬಿ ಕೊಂಡಿದೆ. ಚರಂಡಿ ಇಲ್ಲದೆ ನೀರು ರಸ್ತೆ, ಮನೆಗೆ ನುಗ್ಗುತ್ತಿದೆ. ಕಾಡು ಕಡಿಯುವಂತೆ ಹಲವು ಬಾರಿ ನಗರ ಪಂಚಾಯತ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಈ ಭಾಗದ ಕಾಡು ಕಡಿದು, ಚರಂಡಿ ಮಾಡಿ, ರಸ್ತೆ ಬದಿ ಸ್ವಚ್ಛಗೊಳಿಸುವ ಕೆಲಸ ತಕ್ಷಣ ಆಗದಿದ್ದರೆ, ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಹೇಳಿದ್ದಾರೆ.












