ಕೋಲ್ಕತ್ತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಲ್ಕತ್ತ ನೈಟ್ರೈಡರ್ಸ್ ತಂಡವು 223 ರನ್ಗಳ ಗೆಲುವಿನ ಗುರಿ ನೀಡಿದೆ. ಈಡನ್ ಗಾರ್ಡನ್ನಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ನಿಗದಿತ 20 ಒವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು
ಕೋಲ್ಕತ್ತ 222 ರನ್ ಗಳಿಸಿತು. ಶ್ರೇಯಸ್ ಅಯ್ಯರ್ 50, ಸಾಲ್ಟ್ 48 ರನ್ ಬಾರಿಸಿ, ರಿಂಕು ಸಿಂಗ್ 24, ರಸ್ಸೆಲ್ 27, ರಣ್ದೀಪ್ ಸಿಂಗ್ 9 ಎಸೆತಗಳಲ್ಲಿ 24 ರನ್ ಬಾರಿಸಿದರು. ಬೆಂಗಳೂರು ಪರ ಗ್ರೀನ್, ದಯಾಳ್ ತಲಾ 2 ವಿಕೆಟ್ ಪಡೆದರು. ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ 6ರಲ್ಲಿ ಸೋಲುಂಡಿರುವ ಫಫ್ ಡುಪ್ಲೆಸಿ ಬಳಗಕ್ಕೆ ಪ್ಲೇಆಫ್ ಹಾದಿ ಕಠಿಣವಾಗಿದೆ. ಆದರೂ ಉಳಿದಿರುವ ಏಳು ಪಂದ್ಯಗಳಲ್ಲಿಯೂ ಗೆದ್ದರೆ ಒಂದು ಸಣ್ಣ ಅವಕಾಶ ಸೃಷ್ಟಿಯಾಗಬಹುದು ಎಂಬಂತಹ ಲೆಕ್ಕಾಚಾರವೂ ಇದೆ. ಆದರೆ ಈ ಹಾದಿಯಲ್ಲಿ ಒಂದೇ ಒಂದು ಸೋಲಿನಿಂದ ಕೂಡ ಆರ್ಸಿಬಿ ಟೂರ್ನಿಯಿಂದ ಹೊರಬೀಳುತ್ತದೆ.ಎಂಟು ಅಂಕ ಗಳಿಸಿರುವ ಕೋಲ್ಕತ್ತ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್ಸಿಬಿ ಕೊನೆಯ ಸ್ಥಾನದಲ್ಲಿದೆ.