ಲಖನೌ:ಮಳೆ ಬಾದಿತ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 9 ರನ್ಗಳಿಂದ ರೋಚಕ ಗೆಲುವು ಸಾಧಿಸಿತು.ಮಿಚೆಲ್ ಮಾರ್ಷ್ ಅವರ ಶತಕದ ಬಲದಿಂದ ಲಖನೌ ತಂಡವು 19 ಓವರ್ಗಳಲ್ಲಿ 3 ವಿಕೆಟ್ಗೆ 209 ರನ್ ಗಳಿಸಿತು. ಡಿಎಲ್ಎಸ್ ನಿಯಮದಂತೆ ಆರ್ಸಿಬಿಗೆ 19 ಓವರ್ಗಳಲ್ಲಿ
213 ರನ್ ಗುರಿ ನಿಗದಿಪಡಿಸಲಾಗಿತ್ತು.ಸವಾಲಿನ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ಜೇಕಬ್ ಬೆಥೆಲ್ (4; 5ಎ) ಹಾಗೂ ವಿರಾಟ್ ಕೊಹ್ಲಿ (0; 2ಎ) ಮತ್ತೆ ವಿಫಲರಾದರು. ಇವರಿಬ್ಬರು ಔಟಾದಾಗ ತಂಡದ ಮೊತ್ತ ಕೇವಲ 9.ಸಂಕಷ್ಟದಲ್ಲಿದ್ದ ಆರ್ಸಿಬಿ ತಂಡಕ್ಕೆ ರಜತ್ ಪಾಟೀದಾರ್ (61; 31ಎ, 4×3, 6×6) ಹಾಗೂ ದೇವದತ್ತ ಪಡಿಕ್ಕಲ್ (34; 25ಎ) ಮೂರನೇ ವಿಕೆಟ್ಗೆ 95 (53) ರನ್ ಜೊತೆಯಾಟವಾಡಿ ಆಸರೆಯಾದರು.
ಕೊನೆಯಲ್ಲಿ ಟಿಮ್ ಡೇವಿಡ್ (40; 17ಎ, 4×4, 6×3), ಕೃಣಾಲ್ ಪಾಂಡ್ಯ (ಔಟಾಗದೇ 28; 16ಎ) ಹಾಗೂ ರೊಮಾರಿಯೊ ಶೆಫರ್ಡ್ (ಔಟಾಗದೇ 23; 15ಎ) ಹೋರಾಟ ತೋರಿದರಾದರೂ ಗೆಲುವು ಸಾಧ್ಯವಾಗಲಿಲ್ಲ. ಲಕ್ನೋ ತಂಡದ ಆರಂಭಿಕ ಮಿಚೆಲ್ ಮಾರ್ಷ್ (111; 51ಎ) ಅವರು ಯುವ ಆಟಗಾರ ಅರ್ಷಿಣ್ ಕುಲಕರ್ಣಿ (17 ರನ್) ಅವರೊಂದಿಗೆ ಅಮೋಘ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿದರು. ಬಳಿಕ
ನಿಕೊಲಸ್ ಪೂರನ್ (ಬ್ಯಾಟಿಂಗ್ 38; 23ಎ, 4×4, 6×1).ನಾಯಕ ರಿಷಭ್ ಪಂತ್ (ಔಟಾಗದೇ 32; 10ಎ, 4×4, 6×2) ಮಿಂಚಿನ ಬ್ಯಾಟಿಂಗ್ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು.
ಈ ಅವಧಿಯಲ್ಲಿ ಮೂರು ಸಲ (ಓವರ್: 2ನೇ, 9ನೇ ಮತ್ತು 14ನೇ) ಮಳೆಯಿಂದಾಗಿ ಆಟ ನಿಂತಿತ್ತು.











