ಸುಳ್ಯ:ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಸೆ.1ರಂದು ರಾಯರ 352 ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಭಕ್ತಿ ಶ್ರದ್ಧೆಯಿಂದ ರಾಯರ ಆರಾಧನೆ ನಡೆಯುತಿದೆ.ಸುಳ್ಯದ ರಾಘವೇಂದ್ರ ಮಠದಲ್ಲಿ 7ನೇ ವರ್ಷದ ಆರಾಧನಾ ಮಹೋತ್ಸವ ವಿವಿಧ
ಕಾರ್ಯಕ್ರಮಗಳೊಂದಿಗೆ ನಡೆಯುತಿದೆ.ಬೆಳಗ್ಗೆ ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆ ಕವಚ ಸಮರ್ಪಣೆ ನಡೆದು ಬಳಿಕ ವೈದಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ ,ಪವಮಾನ ಹೋಮ, ಪವಮಾನ ಅಭಿಷೇಕ ನೆರವೇರಿತು.
ಸಂಜೆ 4 ರಿಂದ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ
ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆಯು ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ ಮಹಾಪೂಜೆಯಾಗಿ ನಡೆದು ಪ್ರಸಾದ ವಿತರಣೆ ಅನ್ನ ಸಂತರ್ಪಣೆಯಾಗಿ ಆರಾಧನಾ ಮಹೋತ್ಸವ ಸಂಪನ್ನಗೊಳ್ಳಲಿದೆ.