ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕಿ ಹಾಗೂ ರವೀಂದ್ರ ಜಡೇಜಾರ ಪತ್ನಿ ರಿವಾಬಾ ಜಡೇಜಾ, ರವೀಂದ್ರ ಜಡೇಜಾ ಬಿಜೆಪಿ ಸೇರ್ಪಡೆಯಾಗಿರುವುದನ್ನು
ಖಚಿತ ಪಡಿಸಿದ್ದಾರೆ. ಈ ಪೋಸ್ಟ್ ನೊಂದಿಗೆ ರಿವಾಬಾ ತಮ್ಮ ಹಾಗೂ ತಮ್ಮ ಪತಿಯ ಭಾವಚಿತ್ರ ಮತ್ತು ಅವರಿಬ್ಬರ ಬಿಜೆಪಿ ಸದಸ್ಯತ್ವದ ಚೀಟಿಯನ್ನೂ ಹಂಚಿಕೊಂಡಿದ್ದಾರೆ.
2019ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ರಿವಾಬಾ, 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್ ನಗರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಭಾರತ ತಂಡವು ವಿಶ್ವಕಪ್ ಚಾಂಪಿಯನ್ ಆದ ನಂತರ 35 ವರ್ಷ ವಯಸ್ಸಿನ ರವೀಂದ್ರ ಜಡೇಜಾ ಟಿ-20 ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.