ಸುಳ್ಯ: ಸುಳ್ಯ ತಾಲೂಕಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಆರಂಭಗೊಂಡಿದೆ. ಪಡಿತರ ಚೀಟಿಯಲ್ಲಿ ಹೆಸರು ಮತ್ತಿತರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯ ತಿದ್ದುಪಡಿಗೆ ಅವಕಾಶ ಇದೆ. 31 ಜನವರಿ 2025 ಕೊನೆಯ ದಿನವಾಗಿದೆ.ಪಡಿತರ ಚೀಟಿಯ
ಸದಸ್ಯರ ಹೆಸರು ತಿದ್ದುಪಡಿ,ಸೇರ್ಪಡೆ,ಸದಸ್ಯರ ಫೊಟೋ ಬದಲಾವಣೆ,ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತಿತರ ತಿದ್ದುಪಡಿ ಮಾಡಬಹುದು. ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ನಲ್ಲಿ ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಈಗ ತಿದ್ದುಪಡಿಗೆ ಮಾತ್ರ ಅವಕಾಶ ಇದ್ದು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸದ್ಯ ಅವಕಾಶ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.