ಸುಳ್ಯ: ಜನವರಿ 8 ರಂದು ಮಂಗಳೂರಿನಲ್ಲಿ ಕುದ್ಮುಲ್
ರಂಗರಾವ್ ಟೌನ್ ಹಾಲ್ ನಲ್ಲಿ ನಡೆಯುವ ದ. ಕ. ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ ದ ಪ್ರಚಾರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸುಳ್ಯ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣ ದಲ್ಲಿ ಜರಗಿತು
ಅಧ್ಯಕ್ಷತೆಯನ್ನು ಜಾವಗಲ್ ಹಜ್ರತ್ ಖಲoದರ್ ಶಾ ಟ್ರಸ್ಟ್ ಅಧ್ಯಕ್ಷ ಹಾಜಿ ಪಿ. ಇಸಾಕ್ ಸಾಹೇಬ್ ವಹಿಸಿದ್ದರು.ಬ್ಯಾರಿ ಮಹಾಸಭಾದ
ಅಧ್ಯಕ್ಷ ಆಝೀಜ್ ಬೈಕಂಪಾಡಿ ವಿಷಯ ಪ್ರಸ್ತಾವನೆ ಗೈದರು.ಗಾಂಧಿನಗರ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಅದಂ ಹಾಜಿ ಕಮ್ಮಾಡಿ ಪೋಸ್ಟರ್ ಬಿಡುಗಡೆ ಗೊಳಿಸಿದರು.ಕರ್ನಾಟಕ ಸರ್ಕಾರದ ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಮೊಗರ್ಪಣೆ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಜಿ. ಇಬ್ರಾಹಿಂ ಸೀ ಫುಡ್ ಮೊದಲಾದವರು ಭಾಗವಹಿಸಿದ್ದರು
ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ವಂದಿಸಿದರು
ಸಮಾರಂಭದಲ್ಲಿ ಪ್ರಮುಖರಾದ ಹಾಜಿ ಇಬ್ರಾಹಿಂ ಕತ್ತರ್, ಅಬೂಬಕ್ಕರ್ ಅಡ್ವೋಕೇಟ್, ಮೂಸ ಪೈಂಬಚಾಲ್,ನಗರ ಪಂಚಾಯತ್ ಸದಸ್ಯರಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್,ಇಕ್ಬಾಲ್ ಎಲಿಮಲೆ, ಅಶ್ರಫ್ ಗುಂಡಿ, ಶಾಫಿ ಕುತ್ತಾಮೊಟ್ಟೆ, ಎಸ್. ಪಿ. ಅಬೂಬಕ್ಕರ್,ಯೂಸುಫ್ ಅಂಜಿಕಾರ್, ಬ್ಯಾರಿ ಮಹಾಸಭಾ ಪದಾಧಿಕಾರಿಗಳಾದ ಶಾಕಿರ್ ಹಾಜಿ, ಹಮೀದ್ ಕಿನ್ಯ, ಇ. ಕೆ. ಹುಸೈನ್, ಮಹಮ್ಮದ್ ಹನೀಫ್ ದೇರ್ಲಕಟ್ಟೆ, ಬಶೀರ್ ಪಾಂಡೇಶ್ವರ, ರಫೀಕ್ ಪುತ್ತೂರು, ಮೊದಲಾದವರು ಉಪಸ್ಥಿತರಿದ್ದರು