ಕಲ್ಲುಗುಂಡಿ: ಚರಂಡಿಯ ಅವ್ಯವಸ್ಥೆಯಿಂದಾಗಿ ಮಳೆ ಬಂದರೆ ಮಳೆ ನೀರೆಲ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹರಿಯುವ ಪ್ರಸಂಗ ಕಂಡು ಬಂದಿದೆ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಮಳೆ ಬಂದರೆ ನೀರು ಸರಿಯಾಗಿ

ಚರಂಡಿಯಲ್ಲಿ ಹರಿಯದೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಹರಿಯುವುದು ಕಂಡು ಬಂದಿದೆ. ಕಲ್ಲುಗುಂಡಿ ಭಾಗದಲ್ಲಿ ಏ.9ರಂದು ಸಂಜೆ ಭಾರೀ ಮಳೆಯಾಗಿದ್ದು ಈ ಸಂದರ್ಭದಲ್ಲಿ ಮಳೆ ನೀರೆಲ್ಲ ಹೆದ್ದಾರಿಯಲ್ಲಿಯೇ ಹರಿಯುವುದು ಕಂಡು ಬಂದಿದೆ.