ಮಂಗಳೂರು:ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆ ತನಕ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ ಜಿಲ್ಲೆಗಳಲ್ಲಿ ಭಾಗಷಃ ಮೋಡ ಮಧ್ಯಾಹ್ನದಿಂದ ನಿರಂತರ ತುಂತುರು ಅಥವಾ ಆಗಾಗ ಸಾಮಾನ್ಯ ಮಳೆಯ ಆರಂಭ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಡುಪಿ ಉ.ಕ ಜಿಲ್ಲೆಗಳ ಕರಾವಳಿ ತೀರದ
ತಾಲ್ಲೂಕುಗಳಲ್ಲಿ ಇವತ್ತು ಉತ್ತಮ ಮಳೆಯ ಮುನ್ಸೂಚನೆ ಇದೆ. ವಾಯುಭಾರ ಕುಸಿತ ದುರ್ಬಲ ಆಗುತ್ತಿದ್ದಂತೆ 26 ರಿಂದ ಮಳೆ ಕಡಿಮೆ ಆಗಬಹುದು.ಮಲೆನಾಡಿನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆಯಾಗಬಹುದು. ಕೊಡಗು ಜಿಲ್ಲೆಯ ಅಲ್ಲಲ್ಲಿ ಸಣ್ಣ ಮಳೆಯಾಗಲಿದ್ದು ಕೊಡಗು – ಹಾಸನ ಜಿಲ್ಲೆಯ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.ಸೆಪ್ಟೆಂಬರ್ ಕೊನೆಗೆ ಪೂರ್ವದ ಗುಡುಗು ಮಳೆ ಆರಂಭ ಆಗಬಹುದು.ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾಗಷಃ ಮೋಡದ
ವಾತಾವರಣ ಇರಲಿದ್ದು ದಾವಣಗೆರೆ ವಿಜಯನಗರ ಚಿತ್ರದುರ್ಗ ತುಮಕೂರು ಬೆಂಗಳೂರು – ಗ್ರಾಮಾಂತರ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ತುಂತುರು ಕೆಲವೆಡೆ ಸಾಮಾನ್ಯ ಮಳೆಯಾಗಬಹುದು. ನಾಳೆಯ ನಂತರ ಮಳೆ ಕಡಿಮೆ ಆದರೂ ಸೆಪ್ಟೆಂಬರ್ 29 ರಿಂದ ಮತ್ತೆ ಗುಡುಗು ಮಳೆ ಆರಂಭವಾಗುವ ಮುನ್ಸೂಚನೆ ಇದೆ.
ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇವತ್ತು ಮೋಡದ ವಾತಾವರಣ ಇರಲಿದ್ದು ಬೀದರ್ ಕಲ್ಬುರ್ಗಿ ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ,ಯಾದಗಿರಿ ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ತುಂತುರು – ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಸೆ 26 ರಿಂದ ಮಳೆ ಕಡಿಮೆ ಆಗಿ ಬಿಸಿಲಿನ ವಾತಾವರಣ ಆರಂಭವಾಗಬಹುದು.
ಬಂಗಾಳಕೊಲ್ಲಿಯ ಲೋ ಪ್ರೆಷರ್ ಈಗಾಗಲೇ ಒರಿಸ್ಸಾ ಆಂಧ್ರ ಗಡಿಭಾಗದಲ್ಲಿ ಭೂ ಪ್ರವೇಶಿಸಿದ್ದು ಇದು ಉತ್ತರ ದಿಕ್ಕಿನಲ್ಲಿ ಹಿಮಾಲಯದತ್ತ ಚಲಿಸಬಹುದು. ಪೂರ್ವ ಭಾರತ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಭಾರತದ ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ 2-3 ದಿನ ಉತ್ತಮ ಮಳೆಯಾಗಲಿದ್ದು ಇದು ದುರ್ಬಲ ಆಗುತ್ತಿದ್ದಂತೆ ಮಳೆ ಪೂರ್ತಿ ಕಡಿಮೆ ಆಗಬಹುದು. ಸೆಪ್ಟೆಂಬರ್ 29 ರಿಂದ ದಕ್ಷಿಣ ಕರ್ನಾಟಕದಲ್ಲಿ ಪೂರ್ವದ ಗುಡುಗು ಮಳೆ
ಆರಂಭವಾಗುವ ಸಾಧ್ಯತೆ ಇದೆ.ನಿನ್ನೆ ಕರಾವಳಿಯ ದ.ಕ. ಕಾಸರಗೋಡು ಜಿಲ್ಲೆಗಳಲ್ಲಿ ಮಳೆ ಬಹುತೇಕ ಕಡಿಮೆ ಆಗಿತ್ತು ಉ.ಕ.ದ ಅಂಕೋಲಾ ಕಾರವಾರ ಹೊನ್ನಾವರ ಕುಮಟಾ ಭಟ್ಕಳ ಸಿದ್ದಾಪುರ ತಾಲ್ಲೂಕುಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಬೈಂದೂರು ಕುಂದಾಪುರ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ ಸಾಗರ ತಾಲ್ಲೂಕುಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಬೆಳಗಾವಿ ಧಾರವಾಡ ಬಾಗಲಕೋಟೆ ಬಿಜಾಪುರ ರಾಯಚೂರು ಬಳ್ಳಾರಿ ಜಿಲ್ಲೆಗಳ ಹಲವೆಡೆ ಮಳೆಯಾಗಿದ್ದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.







