ಸುಳ್ಯ: ಪ.ಪೂ ಶಿಕ್ಷಣ ಇಲಾಖೆಯ ವತಿಯಿಂದ ರೋಟರಿ ಸಂಯುಕ್ತ ಪ.ಪೂ ಕಾಲೇಜು ಮಿತ್ತಡ್ಕ-ಆಲೆಟ್ಟಿ , ಸುಳ್ಯ ಇಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ
ಕಾಲೇಜು ಹುಡುಗರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ .ಈ ಪೈಕಿ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಂಝತುಲ್ ಕರಾರ್ ಸರ್ವಾಂಗೀಣ ಆಟಗಾರ, ಹಾಗೂ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎಂ.ವಿಶಾಲ್ ಉತ್ತಮ ದಾಳಿಗಾರ ಬಹುಮಾನವನ್ನು ಪಡೆದುಕೊಂಡಿದ್ದಾರೆ.