ಮಂಗಳೂರು:ಏಷ್ಯನ್ ಗೇಮ್ಸ್ ನ ಮಹಿಳೆಯರ 4*400 ಮೀಟರ್ ರಿಲೆಯಲ್ಲಿ ಚಿನ್ನ ಗೆದ್ದ ತಂಡದ ಸದಸ್ಯೆ ಎಂ.ಆರ್ ಪೂವಮ್ಮ ಮಂಗಳೂರಿನಲ್ಲಿ ಸ್ವಾಗತ ನೀಡಲಾಯಿತು. ಪತ್ರಕರ್ತರ ಜೊತೆ ಮಾತನಾಡಿದ ಅವರು ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಇತರ ರಾಜ್ಯದ ಕ್ರೀಡಾಪಟುಗಳಿಗೆ
ಅಲ್ಲಿನ ರಾಜ್ಯ ಸರ್ಕಾರಗಳು ದೊಡ್ಡ ಮೊತ್ತದ ಬಹುಮಾನ ಘೋಷಿಸಿವೆ. ಕರ್ನಾಟಕ ಸರ್ಕಾರ ಕೂಡ ಕ್ರೀಡಾ ಪಟುಗಳಿಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು. ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ರಾಜ್ಯದ ಎಲ್ಲ ಅಥ್ಲೀಟ್ಗಳಿಗೂ ನಗದು ಬಹುಮಾನ ಸೇರಿ ಬೆಂಬಲ ನೀಡಬೇಕು ಎಂದು ಪೂವಮ್ಮ ಹೇಳಿದರು. ಮುಂದಿನ ಹಾದಿಯ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಳ್ಳಲಿಲ್ಲ. ಭವಿಷ್ಯದಲ್ಲಿ ಏನು ಎಂದು ಗೊತ್ತಿಲ್ಲ, ಕಾದು ನೋಡೋಣ’ ಎಂದು ಅವರು ಹೇಳಿದರು.









