ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕಿರಣ ಬಿ ಇವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಇವರ ಸಂಶೋಧನಾ ಪ್ರಬಂಧಕ್ಕೆ ವಿವಿಯ 25ನೇ ಘಟಿಕೋತ್ಸವದ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು
ಪಿ.ಇ.ಎಸ್, ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಶಿವಮೊಗ್ಗ ಇಲ್ಲಿ ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾಗಿರುವ ಡಾ. ಷಣ್ಮುಖ ಎಂ.ಸಿ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “Advanced graph theoretical analysis of topological indices and their mathematical relations” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.
ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಬಾಳೆಗುಂಡಿಯ ದಿ. ನರಸಿಂಹ ಭಟ್ ಮತ್ತು ದಿ. ಶ್ಯಾಮಲ ದಂಪತಿಗಳ ಪುತ್ರ. ಇವರು ಸುಮಾರು 14 ವರ್ಷಗಳಿಂದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರನ್ನು ಡಾ. ರೇಣುಕಾಪ್ರಸಾದ್ ಕೆ.ವಿ, ಚೌರ್ಮೆನ್ ಕಮಿಟಿ ‘ಬಿ’ ಎ.ಪಿ.ಎಲ್.ಇ.ಸುಳ್ಯ, ಡಾ. ಜ್ಯೋತಿ ಆರ್. ಪ್ರಸಾದ್ ಕಾರ್ಯದರ್ಶಿ, ಕಮಿಟಿ ‘ಬಿ’ ಎ.ಒ.ಎಲ್.ಇ., ಸುಳ್ಯ, ಮೌರ್ಯ ಆರ್. ಕುರುಂಜಿ, ಎಕ್ಸೆಕ್ಯುಟಿವ್ ಡೈರೆಕ್ಟರ್, ಕೆ.ವಿ.ಜಿ.ಡಿ.ಸಿ.&ಹೆಚ್, ಸುಳ್ಯ, ಡಾ. ಉಜ್ವಲ್ ಯು.ಜೆ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ಪ್ರಾಂಶುಪಾಲ ಡಾ. ಸುರೇಶ ವಿ. ಮತ್ತು ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಮತ್ತು ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.