ಸುಳ್ಯ:ಸುಳ್ಯ-ಬಂದಡ್ಕ- ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಬಸ್ ಸರ್ವೀಸ್ ಆರಂಭಿಸಬೇಕು ಎಂಬ ವಿಚಾರದಲ್ಲಿ ಗಡಿನಾಡು ಕನ್ನಡಿಗರ ಸಂಘದ ಪದಾಧಿಕಾರಿಗಳು ಉದುಮ ಶಾಸಕ ಸಿ.ಎಚ್.ಕುಂಞಂಬು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕರ್ನಾಟಕದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರನ್ನು ಸಂಪರ್ಕಿಸಿ ಮನವಿ ನೀಡಿದ ಬಳಿಕ ಕೇರಳದ ಸಾರಿಗೆಮಂತ್ರಿ ಕೆ. ಬಿ.ಗಣೇಶ್ ಕುಮಾರ್ ಅವರನ್ನು
ವಿಷಯ ತಿಳಿಸಿ ಸ್ಪಂದಿಸುಬ ಕುರಿತು ಹಾಗೂ ಬಸ್ ರೂಟ್ ಆರಂಭಿಸುವ ಬಗ್ಗೆ ಮನವಿಯನ್ನು ಸಲ್ಲಿಸಿ ವಿಚಾರಗಳನ್ನು ಪ್ರಸ್ತಾಪಿಸಲು ಶಾಸಕರಿಗೆ ತಿಳಿಸಲಾಯಿತು. ಕೇರಳದ ಕಾಸರಗೋಡಿನಿಂದ ಬೋವಿಕಾನ, ಕುತ್ತಿಕೋಲು, ಬಂದಡ್ಕದ ಕನ್ನಡಿತೋಡು ಮಾರ್ಗವಾಗಿ ಆಲೇಟ್ಟಿ ಸುಳ್ಯ. ಹಾಗೂ ಕಾಂಞoಗಾಡ್ನಿಂದ ಡಿಪೋದಿಂದ ಬೇಕಲ್ ಕೋಟೆ, ಪೊಯಿನಾಚಿ, ಕುತ್ತಿಕೋಲು, ಬಂದಡ್ಕ,ಕನ್ನಾಡಿತೋಡು ಮಾರ್ಗವಾಗಿ ಆಲೆಟ್ಟಿ, ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಬಸ್ ಆರಂಭಿಸಬೇಕು. ಬಾ್ ಆರಂಭವಾದರೆ ಗಡಿನಾಡು ಪ್ರದೇಶದಲ್ಲಿನ ಸಾವಿರಾರು ಮಂದಿ ಸಾರ್ವಜನಿಕರಿಗೆ ಹಾಗೂ ಸುಮಾರು, ಐನೂರರಷ್ಟು, ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಶಾಸಕರಿಗೆ ಗಡಿನಾಡ ಕನ್ನಡಿಗರ ಸಂಘದ ಪದಾಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಬಂದಡ್ಕ
ಗಡಿನಾಡು ಕನ್ನಡಿಗರ ಸಂಘದ ಅಧ್ಯಕ್ಷ, ಪುರುಷೋತ್ತಮ ಬೋಡ್ಡನಕೊಚ್ಚಿ. ಪದಾಧಿಕಾರಿಗಳಾದ, ವೆಂಕಟ್ರಮಣ ಕೊಯಿಂಗಾಜೆ ಅಚ್ಚುತ ಗೌಡ ಇಳoದಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.