ಸುಳ್ಯ: 33/11ಕೆ.ವಿ. ಕಾವು-ಸುಳ್ಯ, 33/11ಕೆ.ವಿ. ಮಾಡಾವು ಬೆಳ್ಳಾರೆ, 33/11ಕೆ.ವಿ. ಮಾಡಾವು- ಬೆಳ್ಳಾರೆ ಗುತ್ತಿಗಾರು ಮತ್ತು, ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.10ರಂದು(ಮಂಗಳವಾರ) 33/11ಕೆ.ವಿ ಬೆಳ್ಳಾರೆ, ವಿದ್ಯುತ್ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಸಾಯಂಕಾಲ 6.00 ಗಂಟೆಯವರೆಗೆ ಹಾಗೂ
33/11ಕೆ.ವಿ ಕಾವು ಮತ್ತು 33/11ಕೆ.ವಿ ಸುಳ್ಳ ವಿದ್ಯುತ್ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದ್ದರಿಂದ 33/11ಕವಿ ಬೆಳ್ಳಾರೆ ಕಾವು ಮತ್ತು ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಅದರಂತೆ ಜೂ.10 ಮಂಗಳವಾರ ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪ್ಪೊ, ತೋಡಿಕಾನ, ಕೊಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.