ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.25ರಂದು ಉಗ್ರಾಣ ತುಂಬುವ ಕಾರ್ಯಕ್ರಮದೊಂದಿಗೆ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೆಸರ ಜಿತೇಂದ್ರ ನಿಡ್ಯಮಲೆ, ತಕ್ಕ ಮುಖ್ಯಸ್ಥರು,ಆಡಳಿತ ಸಮಿತಿಯ
ಸದಸ್ಯರು, ಭಕ್ತಭಿಮಾನಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮಾ.26ರಂದು ಬೆಳಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಾಯಂಕಾಲ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು, ಸಾಯಂಕಾಲ ಗಂಟೆ 5ಕ್ಕೆ ಮುಖ ತೋರಣ ಏರಿಸುವುದು. ಸಾಯಂಕಾಲ ಗಂಟೆ 5.30ರಿಂದ ಶಿಸ್ತು ಅಳೆಯುವುದು, ರಾತ್ರಿ ಗಂಟೆ 7.45ರಿಂದ ದೇವರ ಶ್ರೀ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ ನಡೆಯಲಿದೆ.