ಸುಳ್ಯ:ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಕ್ಷೇತ್ರದಲ್ಲಿ ಕೇವಲ ಒಂದು ವರ್ಷದಲ್ಲಿ ಸುಳ್ಯದ ಬ್ರಾಂಡ್ ಆಗಿ ರೂಪುಗೊಂಡಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎರಡನೇ ವರ್ಷಕ್ಕೆ ಪಾದಾರ್ಪಣೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆಗಳ ಮಹಾ ಪೂರವನ್ನೇ ನೀಡುತಿದೆ. ವರ್ಷ ಪೂರ್ತಿ ಗ್ರಾಹಕರಿಗೆ ಬಹುಮಾನಗಳು, ಉಡುಗೊರೆಗಳನ್ನು ನೀಡುವ ಸಫಲ ಹಬ್ಬಗಳ ಮತ್ತು
ವಿಶೇಷ ಸಂದರ್ಭಗಳಲ್ಲಿ ಹಲವು ವೈಶಿಷ್ಟ್ಯತೆಗಳ ಮೂಲಕ ಗಮನ ಸೆಳೆದು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಹಿಂದೆಂದೂ ಕಂಡು ಕೇಳರಿಯದ ಆಕರ್ಷಕ ಆಫರ್ಗಳನ್ನು ಜಾರಿಗೆ ತಂದಿದೆ. ಸಂಸ್ಥೆಯಲ್ಲಿ ಭರ್ಜರಿ ಫೆಸ್ಟಿವಲ್ ಸೇಲ್ ಆರಂಭಗೊಂಡಿದೆ.ಆಕರ್ಷಕ ದರ ಕಡಿತ ಮಾರಾಟ, ಉಚಿತ ಉಡುಗೊರೆ ಜೊತೆಗೆ ಹಬ್ಬಗಳ ಸಂಭ್ರಮ ಹೆಚ್ಚಿಸಲು ಆಕರ್ಷಕ ಬಂಪರ್ ಯೋಜನೆಯನ್ನು ಜಾರಿಗೆ ತಂದಿದೆ.ಅಂದರೆ ಇಲ್ಲಿಂದ 6 ಸಾವಿರ ರೂ ಮೇಲ್ಪಟ್ಟ ಪ್ರತಿ ಖರೀಗೆ ಲಕ್ಕಿ ಕೂಪನ್ಗಳನ್ನು ನೀಡಲಾಗುತ್ತದೆ. ಈ ಕೂಪನ್ ಡ್ರಾ ನಡೆಸಿ ವಿಜೇತರಾದ ಗ್ರಾಹಕರಿಗೆ ಒಂದು ಲಕ್ಷ ಮೊತ್ತದ ಇಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ.ಅಲ್ಲದೆ

ಗ್ರಾಹಕರಿಗಾಗಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಹಾಗೂ ಗೃಹೋಪಯೋಗಿ ವಸ್ತುಗಳ ಭರ್ಜರಿ ರಿಯಾಯಿತಿ ದರ ಮಾರಾಟ ಮೇಳ ನಡೆಯುತಿದೆ.
ಪ್ರತಿಷ್ಠಿತ ಕಂಪನಿಗಳ ಇಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಫರ್ನಿಚರ್ ಹಾಗೂ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ಸಿಗುವ ಸಫಲದಲ್ಲಿ
ಪ್ರತಿಷ್ಠಿತ ಕಂಪನಿಗಳ ಗೃಹೋಪಯೋಗಿ ವಸ್ತುಗಳ ಪ್ರತೀ ಖರೀದಿಗೆ ಖಚಿತ ಉಡುಗೊರೆ, ಪ್ರತೀ ವಸ್ತುಗಳ ಮೇಲೆ ಬಾರಿ ರಿಯಾಯಿತಿ ಮಾರಾಟ ನಡೆಯುತಿದೆ. 25 ರೂ ಮೇಲ್ಪಟ್ಟ ಪ್ರತಿ ವಸ್ತುವಿಗೂ ಖಚಿತ ಉಡುಗೊರೆ ಸಫಲದ ಗ್ಯಾರಂಟಿ.ಇಲೆಕ್ಟ್ರಾನಿಕ್ಸ್ ಮತ್ತು
ಫರ್ನೀಚರ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಚ್ಚ ಹೊಸ ಪ್ರಯೋಗದ ಮೂಲಕ ಮನೆ ಮಾತಾಗಿ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್, ಫರ್ನೀಚರ್ ಉಪಕರಣಗಳ ಮಾಯಾಲೋಕ ಸೃಷ್ಠಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ಕೇವಲ ಒಂದು ವರ್ಷದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.ಪ್ರಶಾಂತ ಸುಂದರ ಪರಿಸರ ವಿವೇಕಾನಂದ ವೃತ್ತದ ಬಳಿಯ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾದ ಮಳಿಗೆಯಲ್ಲಿ ತೆರೆದಿರುವ ಸಫಲ ಉದ್ಯಮದಲ್ಲಿ ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ವಿವಿಧ ಶ್ರೇಣಿಯ ಅತ್ಯಾಧುನಿಕ ಮತ್ತು ಆಕರ್ಷಕ ಫರ್ನೀಚರ್ಗಳ ಸಂಗ್ರಹ ಇದೆ.ಗುಣಮಟ್ಟದಲ್ಲಿ ರಾಜಿ ಇಲ್ಲದ,ಆದರೆ ಅತೀ

ಕಡಿಮೆ ದರದಲ್ಲಿ, ವಿಶೇಷ ದರ ಕಡಿತದೊಂದಿಗೆ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾಡುತಿದೆ. ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, ಟಾಟಾ ಕ್ರೋಮಾ, ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.
ಬಟರ್ಫ್ಲೈ ಕೌಂಟರ್:
ದೀಪಾವಳಿ ಪ್ರಯುಕ್ತ ಸಫಲ ಉದ್ಯಮವು ಬಟರ್ಫ್ಲೈ ಕಂಪೆನಿ ಸಹಕಾರದಲ್ಲಿ ಆಕರ್ಷಕ ಕೌಂಟರ್ ತೆರೆಯಲಾಗಿದೆ. ಇಲ್ಲಿ ಬಟರ್ ಫ್ಲೈ ಕಂಪೆನಿಯ ವಿವಿಧ ವಸ್ತುಗಳ ಖರೀದಿಗೆ ಶೇ.50ರವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ. ಬಟರ್ಫ್ಲೈ ಇಲೆಕ್ಟ್ರಾನಿಕ್ಸ್ ವಸ್ತುಗಳ ಎಕ್ಸೇಂಜ್ ಮೇಳವೂ ಇದೆ. ಹಳೆಯ ವಸ್ತುಗಳಿಗೆ ಆಕರ್ಷಕ ರೀಸೇಲ್ ವ್ಯಾಲ್ಯು ನೀಡಲಾಗುತ್ತದೆ. ಜೊತೆಗೆ ಭರ್ಜರಿ ದರ ಕಡಿತ ಮಾರಾಟ ಮತ್ತು ಉಚಿತ ಗಿಪ್ಟ್ ಪಡೆಯಬಹುದು..! ಅಂದ ಹಾಗೆ ಈ ಕೌಂಟರ್ ನ.8ರ ತನಕ ಮಾತ್ರ ಇರಲಿದೆ.ಸಫಲ ಉದ್ಯಮದ

ವಿಶಾಲ ಹವಾನಿಯಂತ್ರಿತ ಮಳಿಗೆಗೆ ಪ್ರವೇಶಿಸಿದರೆ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಲೋಕವೇ ತೆರೆದುಕೊಳ್ಳುತ್ತದೆ. ಇಲ್ಲಿ ಏನಿದೆ, ಏನಿಲ್ಲಾ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ಇದೆ. ಎಲ್ಲಾ ಕಂಪೆನಿಗಳ ಆಕರ್ಷಕ ಟಿವಿ, ಎಸಿ,ರೆಫ್ರಿಜರೇಟರ್, ಡಿಶ್ ವಾಶರ್, ವಾಸಿಂಗ್ ಮೆಷಿನ್ ಸೇರಿ ಎಲ್ಲಾ ತರಹದ ಇಲೆಕ್ಟ್ರಾನಿಕ್ಸ್ ಐಟಂಗಳು ಹಾಗು ಫರ್ನೀಚರ್ಗಳು ಲಭ್ಯವಿದೆ.



























