ಪುತ್ತೂರು:ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಎಸ್.ವಿ. ಪ್ರಸಾದ್ ಅವರು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (PDF) ಪ್ರಮಾಣಪತ್ರವನ್ನು
ಪಡೆದಿದ್ದಾರೆ. ಅವರು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದಾರೆ. “ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಹೈ ಪರ್ಫಾರ್ಮೆನ್ಸ್ ಫ್ಲೋಟಿಂಗ್ ಪಾಯಿಂಟ್ ಮಲ್ಟಿಪ್ಲಯರ್ಸ್ ಯೂಸಿಂಗ್ ವೇದಿಕ್ ಮ್ಯಾಥ್ಮ್ಯಾಟಿಕ್ಸ್ ಫಾರ್ ಡಿ ಎಸ್ ಪಿ ಅಪ್ಲಕೆಶನ್ಸ್” ಎಂಬ ವಿಷಯದ ಕುರಿತು ಅವರು ತಮ್ಮ ಪೋಸ್ಟ್ ಡಾಕ್ಟರಲ್ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ವೇದ ಗಣಿತದ
ಸೂತ್ರಗಳನ್ನು ಬಳಸಿಕೊಂಡು ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಕ್ಷೇತ್ರಕ್ಕೆ ಉಪಯುಕ್ತವಾಗುವ ವೇಗದ ಮತ್ತು ಉನ್ನತ ಕಾರ್ಯಕ್ಷಮತೆಯ ಗುಣಕಗಳ ವಿನ್ಯಾಸ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರು ಸಂಶೋಧನೆ ನಡೆಸಿದ್ದಾರೆ.ಡಾ. ಎಸ್.ವಿ. ಪ್ರಸಾದ್ ಅವರು ಸುಳ್ಯದ ಕೇರ್ಪಳ ನಿವಾಸಿ ನಿವೃತ್ತ ಶಿಕ್ಷಕ ಜಿ .ಶಂಕರನಾರಾಯಣ ಹಾಗೂ ಜಿ ಎಸ್ ವಿಜಯಲಕ್ಷ್ಮಿ ಯವರ ಪುತ್ರ.



























