ಪ್ಯಾರೀಸ್:ಜುಲೈ 26ರಿಂದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ.ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಕ್ರೀಡಾಕೂಟಕ್ಕೆ 117 ಕ್ರೀಡಾಪಟುಗಳು ಮತ್ತು 140 ಸಹಾಯಕ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಥ್ಲೆಟಿಕ್ಸ್ ತಂಡದಲ್ಲಿ 29 ಮಂದಿ (11 ಮಹಿಳೆಯರು ಮತ್ತು 18 ಪುರುಷರು) ದೇಶವನ್ನು
ಪ್ರತಿನಿಧಿಸಲಿದ್ದಾರೆ. ಶೂಟಿಂಗ್ 21 ಮತ್ತು ಹಾಕಿ ಒಟ್ಟು 19 ಆಟಗಾರರನ್ನು ಹೊಂದಿದ್ದಾರೆ. 7 ಬ್ಯಾಡ್ಮಿಂಟನ್ ಆಟಗಾರರು ತಂಡದ ಭಾಗವಾಗಿದ್ದು, 8 ಟೇಬಲ್ ಟೆನಿಸ್ ಆಟಗಾರರು ಭಾರತದ ಪರ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ.ಭಾರತವು 20 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿದೆ. ಈಕ್ವೆಸ್ಟ್ರಿಯನ್, ಜೂಡೋ, ರೋಯಿಂಗ್ ಮತ್ತು ವೇಟ್ಲಿಫ್ಟಿಂಗ್ನಲ್ಲಿ ಒಬ್ಬ ಆಟಗಾರ ಭಾಗವಹಿಸುತ್ತಾರೆ. ಕಳೆದ ಬಾರಿಯ ಒಲಿಂಪಿಕ್ಸ್ನಲ್ಲಿ 119 ಅಥ್ಲೀಟ್ಗಳು ಭಾಗವಹಿಸಿದ್ದರು. ಭಾರತ 1 ಚಿನ್ನ ಸಹಿತ ಏಳು ಪದಕ ಗೆದ್ದಿತ್ತು.ಆದರೆ, ಟೊಕಿಯೊ ಒಲಿಂಪಿಕ್ಸ್ಗಿಂತ ಈ ಸಲ ಇಬ್ಬರು ಕಡಿಮೆ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.














