ಪ್ಯಾರಿಸ್: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಭಾನುವಾರ ಅಂತ್ಯವಾಗಿದ್ದು, ಈ ಬಾರಿ ಸರ್ವಶ್ರೇಷ್ಠ ಪ್ರದರ್ಶನ ತೋರಿವೆ. ಕ್ರೀಡಾಕೂಟದಲ್ಲಿ ಭಾರತ ಅಥ್ಲೀಟ್ಗಳು 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟಾರೆ 29 ಪದಕಗಳನ್ನು ಜಯಿಸುವಲ್ಲಿ
ಯಶಸ್ವಿಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎನಿಸಿಕೊಂಡಿವೆ.ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.ಚೀನಾ 94 ಚಿನ್ನ ಸಹಿತ 217 ಪದಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿ ಭದ್ರವಾದರೆ, ಗ್ರೇಟ್ ಬ್ರಿಟನ್ 47 ಚಿನ್ನದ ಪದಕ ಸಹಿತ 120 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಯುಎಸ್ಎ 36 ಚಿನ್ನ ಸಹಿತ 103 ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿವೆ.