ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.3ರಿಂದ ಆರಂಭಗೊಂಡಿದೆ. ಅ. 12ರ ತನಕ ವೈಭವದ ಉತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 6 ರಿಂದ 7.45ರ ತನಕ ಭಜನಾ ಸಂಕೀರ್ತನೆ 8ರಿಂದ 8.30ರ ತನಕ ಅಷ್ಟಾವಾದನ ಕಾರ್ಯಕ್ರಮ ನಡೆಯುತಿದೆ.ಅ.5ರಂದು
ಶಾರದಾಂಬ ಭಜನಾ ಮಂಡಳಿ ಪಂಜ ಇವರಿಂದ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಯಕ್ಷಗಾನ ಸೇವೆ ನಡೆಯಿತು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಅ.4ರಂದು ಶ್ರೀವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ವತಿಯಿಂದ ಭಜನಾ ಸಂಕೀರ್ತನೆ, ರಾಧಾಕೃಷ್ಣ ಮೊಗ್ರ ಅವರಿಂದ ನಾಗಸ್ವರ ನಡೆಯಿತು. ಇಂದು ಶ್ರೀ ದುರ್ಗಾ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾ ಮಕ್ಕಳ ಭಜನಾ ಮಂಡಳಿ ಪೆರುವಾಜೆ ವತಿಯಿಂದ ಭಜನಾ ಸಂಕೀರ್ತನೆ ಹಾಗೂ ಜಲದುರ್ಗಾ ಮಕ್ಕಳ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ.
