ಪಂಜ:ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಹಣಕಾಸು ಅಯೋಗದ ಅಧ್ಯಕ್ಷ ಸಿ ನಾರಾಯಣ ಸ್ವಾಮಿ
ಕುಟುಂಬ ಸಮೇತರಾಗಿ ಸೆ.7 ರಂದು ರಾತ್ರಿ ಭೇಟಿ ನೀಡಿದರು.
ಅವರನ್ನು ದೇವಳದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಪಾಲ ಗೌಡ ಮರಕಡ ಕಾಚಿಲ, ಸಂತೋಷ್ ರೈ ಪಲ್ಲತ್ತಡ್ಕ, ಧರ್ಮಣ್ಣ ನಾಯ್ಕ ಗರಡಿ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ಕೇಶವ , ಖಜಾಂಜಿ ವಾಸುದೇವ ಮೇಲ್ಪಾಡಿ,ಕುದ್ವ,ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು, ಚಿನ್ನಪ್ಪ ಸಂಕಡ್ಕ, ಚಂದ್ರಶೇಖರ ಇಟ್ಯಡ್ಕ,ಕುಸುಮಾಧರ ಕಕ್ಯಾನ,ಮಹಾಲಿಂಗ ಸಂಪ, ಜಗದೀಶ್ ಬಂಟ್ವಾಳ,ಭಕ್ತಾದಿಗಳು ಉಪಸ್ಥಿತರಿದ್ದರು.