ಪಂಜ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಕದಿರು ಗದ್ದೆಯಲ್ಲಿ ಸೆ.6 ರಂದು ಕದಿರು ಪೂಜೆ ನಡೆದು ಕದಿರು ತೆಗೆಯಲಾಯಿತು. ಸೆ.7ರಂದು ಗಣಹವನ, ಸಾಮೂಹಿಕ ಅಪ್ಪಕಜ್ಜಾಯ ಸೇವೆ, ಕದಿರು ವಿತರಣೆ ಜರುಗಲಿದೆ.ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯೆ ಮಾಲಿನಿ ಕುದ್ವ, ವ್ಯವಸ್ಥಾಪನಾ ಸಮಿತಿಯ
ಮಾಜಿ ಸದಸ್ಯ ರಜಿತ್ ಭಟ್ ಪಂಜಬೀಡು,ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಕುದ್ವ, , ಕುಸುಮಾಧರ ಕಕ್ಯಾನ, ವಸಂತ ಅಳ್ಪೆ ಕೋಡಿ ಉಪಸ್ಥಿತರಿದ್ದರು.ದೇಗುಲದ ಅರ್ಚಕ ನರೇಶ್ ಕೃಷ್ಣರವರು ಪೂಜೆ ನೆರವೇರಿಸಿದರು.
ಸೆ.7 ರಂದು ಗಣೇಶ ಚತುರ್ಥಿಯಂದು ಬೆಳಿಗ್ಗೆ 7 ಗಂಟೆಗೆ ದೇಗುಲದ ಕದಿರು ಗದ್ದೆಯಿಂದ ತೆನೆಯನ್ನು ದೇಗುಲಕ್ಕೆ ಚೆಂಡೆ,ವಾದ್ಯ ಶಂಖ ನಾದದೊಂದಿಗೆ ತಂದು ದೇಗುಲಕ್ಕೆ ಹಾಗೂ ದೇಗುಲದ ದೈವಸ್ಥಾನಗಳಿಗೆ ಕದಿರು ಕಟ್ಟಿ ಬೆಳಿಗ್ಗಿನ ಪೂಜೆ ಬಳಿಕ ಭಕ್ತರಿಗೆ ಕದಿರು ವಿತರಣೆ ಜರುಗಲಿದೆ.