ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತಿದ್ದು ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ.ಇಂದು(ಫೆ.6ರಂದು) ಬೆಳಿಗ್ಗಿನಿಂದ ವಿವಿಧ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಬಲಿ ಸೇವೆ ನಡೆಯಿತು.
ರಾತ್ರಿ 8ಕ್ಕೆ ಬಲಿ ಹೊರಟು ರಾತ್ರಿ 11 ರಿಂದ ಬ್ರಹ್ಮರಥೋತ್ಸವ ಮತ್ತು
ಕಾಚುಕುಜುಂಬ ದೈವಗಳ ನರ್ತನ ಸೇವೆ ನಡೆಯಲಿದೆ.
ಫೆ. 1ರಿಂದ ಆರಂಭಗೊಂಡ ಜಾತ್ರೋತ್ಸವ 9ರ ತನಕ ನಡೆಯಲಿದೆ. ಜಾತ್ರೋತ್ಸವದ ಪ್ರಯುಕ್ತ ದೇವಾಲಯ ಪೂರ್ತಿಯಾಗಿ ಹೂವುಗಳಿಂದ ಅಲಂಕರಿಸಲಾಗಿದೆ. ಪುಷ್ಪಾಲಂಕಾರಗೊಂಡ ದೇವಾಲಯ ಕಣ್ಮನ ಸೆಳೆಯುತಿದೆ.

ಫೆ.5ರಂದು ರಾತ್ರಿ ದೀಪೋತ್ಸವ, ದೈವಗಳ ನರ್ತನ ಸೇವೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಭಕ್ತಿ ಸಂಗೀತ ನೃತ್ಯ ಸಂಭ್ರಮ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ ‘ಪ್ರಚಂಡ ವಿಶ್ವಾಮಿತ್ರ ರಕ್ತರಾತ್ರಿ’ ನಡೆಯಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್,ವ್ಯವಸ್ಥಾಪನ ಸಮಿತಿ ಸದಸ್ಯರು, ಪ್ರಮುಖರು, ಸಾವಿರಾರು ಭಕ್ತರು ಭಾಗವಹಿಸಿದ್ದರು.
