ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವ ಜ.24 ರಿಂದ ಫೆ.9 ರ ತನಕ ನಡೆಯಲಿದೆ.ಜ.24.ರಂದು ಗೊನೆ ಕಡಿಯುವ ಕಾರ್ಯಕ್ರಮ ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.ಮುಂಜಾನೆ ದೇವಳದಲ್ಲಿ ಪ್ರಾರ್ಥನೆ ನಡೆದು ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ
ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಗೌರವ ಸಲಹೆಗಾರ ಆನಂದ ಗೌಡ ಕಂಬಳ, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ವ್ಯವಸ್ಥಾಪನಾ ಸದಸ್ಯರಾದ ಧರ್ಮಪಾಲ ಗೌಡ ಮರಕ್ಕಡ ಕಾಚಿಲ,ಮಾಯಿಲಪ್ಪ ಗೌಡ ಎಣ್ಮೂರು, ಪವಿತ್ರ ಮಲ್ಲೆಟ್ಟಿ , ಮಾಲಿನಿ ಕುದ್ವ , ಸಂತೋಷ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್ ಉತ್ಸವ ಸಮಿತಿಯ ಸಂಚಾಲಕರು , ಸದಸ್ಯರು, ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.