ಸುಬ್ರಹ್ಮಣ್ಯ:ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ನಿನ್ನೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ದರ್ಶನ ಪಡೆದು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.ಈ ಸಂದರ್ಭದಲ್ಲಿ
ಪತ್ನಿ ಅನಿತಾ ಕುಮಾರ ಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಸೊಸೆ ರೇವತಿ ನಿಖಿಲ್ ಕುಮಾರಸ್ವಾಮಿ ಅವರ ಜೊತೆಗಿದ್ದರು. ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ,ಮುಖಂಡರಾದ

ಎಂ.ಬಿ ಸದಾಶಿವ, ಜಾಕೆ ಮಾಧವ ಗೌಡ, ದಯಾಕರ ಆಳ್ವ, ಮೀರಾ ಸಾಹೇಬ್, ಸೋಮಸುಂದರ ಕೂಜುಗೋಡು, ಸುಕುಮಾರ್ ಕೋಡ್ತಗುಳಿ, ರಾಕೇಶ್ ಕುಂಟಿಕಾನ,ಡಾ. ತಿಲಕ್ ಎ.ಎ, ಉದಯಕುಮಾರ್ ಡಿ.ಎಸ್, ಶಿವರಾಮ ಚಿಲ್ತಡ್ಕ, ಸತ್ಯನಾರಾಯಣ ಚಿಮ್ಟಿಕಲ್ಲು, ಜಯಂತ ಪಂಬೆತ್ತಾಡಿ, ನಿಹಾಲ್ ಕೋಡ್ತುಗಳಿ,ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಗಿರಿಧರ ಸ್ಕಂದ, ದಿನೇಶ್ ಬಿ.ಎನ್, ಲೋಲಾಕ್ಷಾ ಕೈಕಂಬ, ಸುರೇಶ್ ಬೈಲು, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮತ್ತಿತರರು ಉಪಸ್ಥಿತರಿದ್ದರು.














