ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿಯ 2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸುಳ್ಯ ಜೇಸಿ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷೆ ತಾರಾ ಚೂಂತಾರು, ನಿಕಟಪೂರ್ವ ಅಧ್ಯಕ್ಷರಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿಯಾಗಿ ಸತ್ಯಶಾಂತಿ ತ್ಯಾಗ ಮೂರ್ತಿ, ಕೋಶಾಧಿಕಾರಿಯಾಗಿ ಪ್ರಶಾಂತ್ ಅಂಬೆಕಲ್ಲು, ಜತೆ ಕಾರ್ಯದರ್ಶಿಯಾಗಿ
ಶೋಭಾ ಅಶೋಕ್ ಚೂಂತಾರು,ಲೇಡಿ ಜೇಸಿ ಕೋ ಆರ್ಡಿನೇಟರ್ ಆಗಿ ಸುನಿತಾ ರವಿಕುಮಾರ್ ಅಕ್ಕೋಜಿಪಾಲ್, ಸಪ್ತಾಹ ನಿರ್ದೇಶಕರಾಗಿ ಮಹೇಶ್ ಮೇರ್ಕಜೆ, ಉಪಾಧ್ಯಕ್ಷರಾಗಿ ರವಿಕುಮಾರ್ ಅಕ್ಕೋಜಿಪಾಲ್, ಉಮೇಶ್ ಬೊಳುಗಲ್ಲು, ಗೀತಾಂಜಲಿ ಗುರುರಾಜ್, ರಮ್ಯಾ ರಂಜಿತ್ ಕುಕ್ಕೆಟ್ಟಿ, ಉಷಾ ನವೀನ್ ಕುಮಾರ್ನಿ ರ್ದೇಶಕರಾಗಿ
ವಿನೋದ್ ಮೂಡಗದ್ದೆ, ಚೈತನ್ಯ ದೇವರಾಜ್, ನಮೃತಾ ಚೂಂತಾರು, ಯಶಿಕಾ ಚೂಂತಾರು, ಸುಪ್ರೀತ್ ಮೋಂಟಡ್ಕ,ಆಯ್ಕೆಯಾದರು.
ಈ ಸಂದರ್ಭದಲ್ಲಿ

ತಾರ,ಸತ್ಯಶಾಂತಿ,ಪ್ರಶಾಂತ್,ಮಹೇಶ್,ಸುನಿತಾ,ಶೋಭಾ
ಮುಖ್ಯ ಚುನಾವಣಾಧಿಕಾರಿಯಾಗಿ ಘಟಕದ ಮಾಜಿ ಅಧ್ಯಕ್ಷರಾದ ಸುರೇಶ್ ಕಾಮತ್, ಸದಸ್ಯರಾಗಿ ಘಟಕದ ಮಾಜಿ ಗುರುರಾಜ್ ಅಜ್ಜಾವರ, ನವೀನ್ ಕುಮಾರ್, ಗುರುಪ್ರಸಾದ್ ನಾಯಕ್ ಉಪಸ್ಥಿತರಿದ್ದು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಘಟಕದ ಮಾಜಿ ಅಧ್ಯಕ್ಷರಾಗಿ ಅಬ್ದುಲ್ಲ ಅರಂತೋಡು, ದಿನೇಶ್ ಮಡಪ್ಪಾಡಿ, ದೇವಿಪ್ರಸಾದ್ ಕುದ್ಪಾಜೆ, ಅಶೋಕ್ ಚೂಂತಾರು, ದೇವರಾಜ್ ಕುದ್ಪಾಜೆ, ರಂಜಿತ್ ಕುಕ್ಕೆಟ್ಪಿ ಉಪಸ್ಥಿತರಿದ್ದರು.
















