ಶಬರಿಮಲೆ:ಎರಡು ತಿಂಗಳ ಕಾಲ ನಡೆಯಲಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ತೀರ್ಥಯಾತ್ರೆಗಾಗಿ ಸೋಮವಾರ ಸಂಜೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಬಾಗಿಲು ತೆರೆಯಲಾಯಿತು. ಕ್ಷೇತ್ರದ ತಂತ್ರಿ ಕಂಠರರ್ ಬ್ರಹ್ಮದತ್ತನ್ ಸಾನ್ನಿಧ್ಯದಲ್ಲಿ ಮುಖ್ಯ ಅರ್ಚಕ ಇ.ಡಿ.ಪ್ರಸಾದ್ ನಂಬೂದಿರಿ ಬಾಗಿಲು ತೆರೆದರು.ಬಳಿಕ
ನೂತನ ಮುಖ್ಯ ಅರ್ಚಕರು ಅಧಿಕಾರ ವಹಿಸಿಕೊಂಡರು. ಶಬರಿಮಲೆ ಮುಖ್ಯ ಅರ್ಚಕರಾಗಿ ಅರೀಕ್ಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ ಮತ್ತು ಮಾಳಿಕಪುರಂ ಮುಖ್ಯ ಅರ್ಚಕರಾಗಿ ಎ.ದಾಮೋದರನ್ ನಂಬೂದಿರಿ ಅಧಿಕಾರ ವಹಿಸಿಕೊಂಡರು.ಮೊದಲ ಇಂದು ಸನ್ನಿಧಾನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಮಂಡಲ ಪೂಜೆ ತೀರ್ಥಯಾತ್ರೆಯು ಡಿಸೆಂಬರ್ 27ರವರೆಗೆ ನಡೆಯಲಿದೆ.ಮಕರವಿಳಕ್ಕು ತೀರ್ಥಯಾತ್ರೆ ಡಿ.30ರಿಂದ ಆರಂಭವಾಗಲಿದೆ. ಮಕರವಿಳಕ್ಕು ಜನವರಿ 14ರಂದು ನಡೆಯಲಿದೆ. ಜನವರಿ 20ರಂದು ತೀರ್ಥಯಾತ್ರೆ ಮುಕ್ತಾಯಗೊಳ್ಳಲಿದೆ. ಪಂಪೆ,ನಿಲಕ್ಕಲ್, ಶಬರಿಮಲೆ ಸೇರಿದಂತೆ ತೀರ್ಥಯಾತ್ರೆಗಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.














