ಶಬರಿಮಲೆ:ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ತೀರ್ಥಯಾತ್ರೆಗಾಗಿ ಸೋಮವಾರ ಸಂಜೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಬಾಗಿಲು ತೆರೆಯಲಿದೆ. ಕ್ಷೇತ್ರದ ತಂತ್ರಿ ಕಂಠರರ್ ಬ್ರಹ್ಮದತ್ತನ್ ಸಾನ್ನಿಧ್ಯದಲ್ಲಿ ಮುಖ್ಯ ಅರ್ಚಕ ಇ.ಡಿ.ಪ್ರಸಾದ್ ನಂಬೂದಿರಿ ಬಾಗಿಲು ತೆರೆಯಲಿದ್ದಾರೆ.ಬಳಿಕ
ನೂತನ ಮುಖ್ಯ ಅರ್ಚಕರು ಅಧಿಕಾರ ವಹಿಸಿಕೊಳ್ಳುವರು. ಶಬರಿಮಲೆ ಮುಖ್ಯ ಅರ್ಚಕರಾಗಿ ಅರೀಕ್ಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ ಮತ್ತು ಮಾಳಿಕಪುರಂ ಮುಖ್ಯ ಅರ್ಚಕರಾಗಿ ಎ.ದಾಮೋದರನ್ ನಂಬೂದಿರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಂಡಲ ಪೂಜೆ ತೀರ್ಥಯಾತ್ರೆಯು ಡಿಸೆಂಬರ್ 27ರವರೆಗೆ ನಡೆಯಲಿದೆ.ಮಕರವಿಳಕ್ಕು ತೀರ್ಥಯಾತ್ರೆ ಡಿ. 30ರಿಂದ ಆರಂಭವಾಗಲಿದೆ. ಮಕರವಿಳಕ್ಕು ಜನವರಿ 14ರಂದು ನಡೆಯಲಿದೆ. ಜನವರಿ 20ರಂದು ತೀರ್ಥಯಾತ್ರೆ ಮುಕ್ತಾಯಗೊಳ್ಳಲಿದೆ.














