ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಆರಂಭ ಗೊಂಡಿದೆ.ರಾತ್ರಿ 8ಕ್ಕೆ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ನಡೆಯಿತು.ನವರಾತ್ರಿ ಉತ್ಸವದ ಅಂಗವಾಗಿ ಭಜನಾ ಸಂಕೀರ್ತನೆ ಮತ್ತು
ಕಲಾ ಸೇವೆ ನೆರವೇರಿತು. ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ,ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಇವರಿಂದ ಭಜನಾ ಸಂಕೀರ್ತನೆ ಮತ್ತು

ಸ್ತುತಿ. ಆರ್.ಭಟ್,ಪ್ರಸ್ತುತಿ ನೆಕ್ಕಿಲ ಇವರಿಂದ ಭಕ್ತಿಗಾನ ನಡೆಯಿತು. ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು,ಭಕ್ತಾದಿಗಳು ಪಾಲ್ಗೊಂಡಿದ್ದರು.
ನಾಳೆ (ಅ.12 ರಂದು) ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ ಕಲಾ ಸೇವೆ ನಡೆಯಲಿದೆ.








