ಸುಳ್ಯ:ಮಕ್ಕಳ ಬೆಳವಣಿಗೆ ಪೂರಕವಾದ ಮತ್ತು ಮಕ್ಕಳ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿ ಮಕ್ಕಳ ಹಬ್ಬ ಮೂಡಿ ಬಂದಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘಿಸಿದರು.ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ
ಧೈಯದೊಂದಿಗೆ ಸುಳ್ಯದಲ್ಲಿ ಮೂರು ದಿನಗಳ ಕಾಲ ನಡೆದ ಸಂಕಲ್ಪ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮಕ್ಕಳ ಬೌದ್ಧಿಕ,ಶೈಕ್ಷಣಿಕ ಬೆಳವಣಿಗೆಗೆ ಈ ರೀತಿಯ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ ‘ನಮ್ಮಲ್ಲಿ ಗುಣಮಟ್ಟ ಇದ್ದರೆ ಜಗತಿನ ಯಾವ ರಾಷ್ಟ್ರದೊಂದಿಗೆ ಸ್ಪರ್ಧೆ ಮಾಡಬಹುದು ಎಂದು

ಹೇಳಿದರು.ಜಗತ್ತಿನ ಸ್ವರ್ಗ ಅಂತ ಇದ್ದರೆ ಅದು ಭಾರತ ಮಾತ್ರ. ಅತ್ಯಂತ ಸುಖವಾಗಿ ಇಲ್ಲಿ ಬದುಕಬಹುದು ಎಂದು ಅವರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತ ಜಿಲ್ಲೆಯಾಗಲು ಅಡಿಕೆ ಕೃಷಿ ಕಾರಣ ಎಂದ ಅವರು ಅಡಿಕೆಗೆ ಸ್ಥಿರ ಮಾರುಕಟ್ಟೆ ಒದಗಿಸಲು,ಕೊಕ್ಕೊ ಕೃಷಿಗೂ ಉತ್ತಮ ಮಾರುಕಟ್ಟೆ ನೀಡಲು ಸಾಧ್ಯವಾಗಿದೆ.ಚಾಕಲೇಟ್ ಉದ್ಯಮವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ
ಎಂದು ಅವರು ಹೇಳಿರು.
ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ, ಹಿರಿಯ ಪತ್ರಕರ್ತ ಡಾ. ಯು.ಪಿ.ಶಿವಾನಂದ,ವಿಷನ್ ಸ್ಟೋನ್ಕೇರ್ನ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೋಡಿಬೈಲ್ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿ ನಾಯಕರಾದ ಮೋನಿಷ್.ಕೆ, ಕೌಶಿಕ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಸಂಯೋಜಕರಾದ ಲೋಕೇಶ್ ಊರುಬೈಲು,ಯಶ್ವಿತ್ ಕಾಳಂಮನೆ, ರಂಜಿತ್ ಅಡ್ತಲೆ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ಸನ್ಮಾನಿತರ ವಿವರ ನೀಡಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








