ಸುಳ್ಯ:ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೊಯ ತಂಙಳ್ ಅವರು ಆ. 4ರಂದು ಕಮಲಅಧಿಕಾರ ಸ್ವೀಕರಿಸಿದರು. ಬದುಕಿನಲ್ಲಿ ಅತ್ಯುತ್ತಮ ಆಶಯ ಆದರ್ಶವನ್ನು ಪಾಲಿಸಿಕೊಂಡು
ದೇವರ ಕಲ್ಪನೆಯನ್ನು ಪಾಲಿಸಿ ಬದುಕಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಸ್ಸಯ್ಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಅವರು ಪೇಟ ಹಾಗು ಕೋಟನ್ನು ತೊಡಿಸಿದರು.ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಪ್ರಾರ್ಥನೆ ನೆರವೇರಿಸಿದರು. ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿ ಉಮರ್ ಮುಸ್ಲಿಯಾರ್ ಕೊಯ್ಯೋಡು
ಕಾರ್ಯಕ್ರಮ ಉದ್ಘಾಟಿಸಿದರು.ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ

ಅಬ್ದುಲ್ ಸಲಾಂ ಬಾಖವಿ ಮುಖ್ಯ ಭಾಷಣ ಮಾಡಿದರು. ಸುಳ್ಯ ತಾಲೂಕು ಸಂಯುಕ್ತ ಜಮಾಅತ್ನ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಅಧ್ಯಕ್ಷತೆ ವಹಿಸಿದ್ದರು.ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಶೈಖುನಾ ಅಬ್ದುಲ್ಲಾ ಫೈಝಿ ಮುಸ್ಲಿಯಾರ್ ಕೊಡಗು, ಸಮಸ್ತ ಮುಶಾವರ ಕರ್ನಾಟಕ ಅಧ್ಯಕ್ಷ
ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ದುಗಲಡ್ಕ, ಕರ್ನಾಟಕ ರಾಜ್ಯ

ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಇಸಾಕ್ ಹಾಜಿ ಪಾಜಪಳ್ಳ, ಮೂಸ ಕುಂಞಿ ಪೈಂಬೆಚ್ಚಾಲ್,ಸಯ್ಯಿದ್ ಅಮೀರ್ ತಂಙಳ್ ಕಿನ್ಯ ,ಸಯ್ಯಿದ್ ಅಕ್ರಂ ಅಲಿ ತಂಙಳ್, ಸಯ್ಯಿದ್ ಹಕೀಂ ತಂಙಳ್ ಆದೂರು, ಅನೀಶ್ ಕೌಸರಿ ಮತ್ತಿತರರು ಉಪಸ್ಥಿತರಿದ್ದರು.ಸುಳ್ಯ ತಾಲೂಕು

ಸಮಸ್ತ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಹಮೀದ್ ಹಾಜಿ, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಸಂಘಟನಾ ಕಾರ್ಯದರ್ಶಿ ಜಮಾಲ್ ಬೆಳ್ಳಾರೆ, ಸುಳ್ಯ ತಾಲೂಕು ಮದ್ರಸಾ ಮೆನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ, ಎಸ್ಕೆಎಸ್ಎಸ್ಎಫ್ ವಲಯಾಧ್ಯಕ್ಷ ಅಬೂಬಕ್ಕರ್ ಪೂಪಿ 13 ಜಮಾ ಅತ್ಗಳ ಅಧ್ಯಕ್ಷರುಗಳು,
ಮತ್ತಿತರರು ಉಪಸ್ಥಿತರಿದ್ದರು.ನಹೀಂ ಫೈಝಿ ಸ್ವಾಗತಿಸಿದರು.ಖಾಜಿ ಬೈಯತ್ ನಿರ್ವಹಣೆಯನ್ನು ಹಸನ್ ಅರ್ಷದಿ ಬೆಳ್ಳಾರೆ, ಮಹಮ್ಮದ್ ನವವಿ ಮುಂಡೋಳೆ ನೆರವೇರಿಸಿದರು. ಅದ್ನಾನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.












