ಸುಳ್ಯ: ಭಾರತೀಯ ಸೇನಾಪಡೆಗಳು ಉಗ್ರಗಾಮಿಗಳ ನೆಲೆಗಳನ್ನು ನೆಲಸಮಮಾಡಿದ ಸಿಂಧೂರ ಕಾರ್ಯಚರಣೆಯ ಹಿನ್ನೆಲೆಯಲ್ಲಿ ದೇಶದ ವೀರ ಸೈನಿಕರಿಗೆ ಸುಳ್ಯ ಯುವಕಾಂಗ್ರೆಸ್ ನೇತೃತ್ವದಲ್ಲಿ
ಅಭಿನಂದನೆ ಸಲ್ಲಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್,ಜಿಲ್ಲಾ
ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಳ್ಯ ಬ್ಲಾಕ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಮಾತನಾಡಿದರು.ಯುವ ಕಾಂಗ್ರೇಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಎಂ ಹೆಚ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಶಿಧರ್ ಎಂ ಜೆ, ಶಾಫಿ ಕುತ್ತಮೊಟ್ಟೆ, ಡೇವಿಡ್ ಧೀರಾ ಕ್ರಾಸ್ತಾ, ರಾಜು ಪಂಡಿತ್, ನಂದರಾಜ್ ಸಂಕೇಶ್, ಧರ್ಮಪಾಲ ಕೊಯಿಂಗಾಜೆ, ಸಿದ್ದಿಕ್ ಕೊಕ್ಕೊ, ಶಿಲ್ಪಾ ಇಬ್ರಾಹಿಂ, ಮಹೇಶ್ ಬೆಳ್ಳಾರ್ಕರ್, ಭಾಸ್ಕರ ಪೂಜಾರಿ ಬಾಜಿನಡ್ಕ, ಭೋಜಪ್ಪ ನಾಯ್ಕ ಅಡ್ಕಾರ್, ಕೇಶವ ಮೊರಂಗಲ್ಲು, ಚೆನ್ನಕೇಶವ ಕಣಿಪಿಲ, ಪಕೀರೇಶ್ ಜಯನಗರ, ವಿಜಯ ಕುಮಾರ್ ಆಲೆಟ್ಟಿ, ಪ್ರಕಾಶ್ ಅರಂತೋಡು, ಸಲೀಂ ಪೆರುಂಗೋಡಿ, ರಹೀಂ ಬೀಜದಕೊಚ್ಚಿ, ರಾಮಕೃಷ್ಣ ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು. ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ಗೋಕುಲ್ ದಾಸ್ ವಂದಿಸಿದರು.