ಸುಳ್ಯ:15ನೇ ಹಣಕಾಸು ಅನುದಾನ ಸುಳ್ಯ ನಗರಕ್ಕೆ ಬಾರದೆ ಸುಳ್ಯ ನಗರಕ್ಕೆ ಅಭಿವೃದ್ಧಿಗೆ ಅನುದಾನದ ಕೊರತೆ ಉಂಟಾಗಿದೆ, ಇದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಪಂಚಾಯತ್ ಆಡಳಿತದ ಅವಧಿ
ಮುಗಿಯುವ ಮುನ್ನ ಪ್ರತಿ ಸದಸ್ಯರಿಗೆ 10 ಲಕ್ಷ ಅನುದಾನ ಮೀಸಲಿಟ್ಟಿದ್ದರು. ಆದರೆ ಅನುದಾನ ಇಲ್ಲದೆ ಕೆಲಸಗಳು ಆಗ್ತಾ ಇಲ್ಲ. ನಗರ ಪಂಚಾಯತ್ಗೆ ಕೇಂದ್ರ ಸರಕಾರದಿಂದ ಬರುವ
15ನೇ ಹಣಕಾಸು ಅನುದಾನದಲ್ಲಿ 2024-25ರಲ್ಲಿ ಒಂದು ಕಂತು ಮಾತ್ರ ಬಂದಿದೆ, 2025-26 ಸಾಲಿನಲ್ಲಿ ಬರಲೇ ಇಲ್ಲ. 2026-27ನೇ ಸಾಲಿಗೆ 16ನೇ ಹಣಕಾಸು 2 ಕೋಟಿ ಮಂಜೂರಾಗಿದೆ ಆದರೆ ಹಣ ಬಂದಿಲ್ಲ.ಈ ಅನುದಾನ ತರಿಸಲು ಬಿಜೆಪಿಯವರು ಯಾಕೆ ಪ್ರಯತ್ನ ಮಾಡುತ್ತಾ ಇಲ್ಲಾ. ಕೇಂದ್ರ ಸರಕಾರದಿಂದ ಸುಳ್ಯಕ್ಕೆ ಅಭಿವೃದ್ಧಿಗೆ ಎಷ್ಟು ಅನುದಾನ ತರಲಾಗಿದೆ, ಸಂಸದರು ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು ರಾಜ್ಯ ಸರಕಾರದ ಅನುದಾನಕ್ಕೆ ಬ್ಯಾನರ್ ಅಳವಡಿಸುವ ಬದಲು ಬಿಜೆಪಿಗರು ಕೇಂದ್ರದಿಂದ ಅನುದಾನ ತರಿಸಲಿ ಎಂದು ಒತ್ತಾಯಿಸಿದರು.15 ನೇ ಹಣಕಾಸು ಹಣ ತರಿಸಿ ಎಂದು ಸವಾಲು ಹಾಕಿದರು.
ಮಳೆ ಬಂದ ಕೂಡಲೇ ಚರಂಡಿಯಿಲ್ಲದೆ ಮಳೆ ನೀರೆಲ್ಲ ಸುಳ್ಯದ ರಸ್ತೆಯಲ್ಲಿಯೇ ಹರಿಯುತಿದೆ.ಇದರಿಂದ ಕಂಪೌಂಡ್ಗಳು ಕುಸಿಯುತಿದೆ.ಆದುದರಿಂದ
ನಗರ ಪಂಚಾಯತ್ ವ್ಯಾಪ್ತಿಯ ಚರಂಡಿಗಳನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ನಗರ ಪಂಚಾಯತ್ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ ಎಂದು ಹೇಳಿದರು. ಸುಳ್ಯದ ಮೀನು ಮಾರುಕಟ್ಟೆ ನಷ್ಟ ಆಗಲು ಹಿಂದಿನ ಆಡಳಿತದ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ದೂರಿದರು.
ಒಳಚರಂಡಿ 2.87 ಕೋಟಿ ಕಾಮಗಾರಿ ಸಂಪೂರ್ಣ ನಾಶವಾಗಿದೆ. ಅಮೃತ್ 2 ಯೋಜನೆ ಸಮರ್ಪಕವಾಗಿ ಮಾಡುತ್ತಿಲ್ಲ. ಒಡೆದ ಪೈಪ್ ಸರಿಪಡಿಸುತ್ತಿಲ್ಲ, ಅಗೆದ ರಸ್ತೆ ಸರಿಪಡಿಸಿಲ್ಲ.ಸಂಪೂರ್ಣ ಕೆಲಸ ಆಗದೆ ನಗರ ಪಂಚಾಯತ್ಗೆ ಹಸ್ತಾಂತರ ಮಾಡಬಾರದು ಎಂದು ಹೇಳಿದರು.
ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್, ಡೀಸಿಲ್, ಬೆಲೆ ಏರಿಕೆ ಮಾಡಿ ಕೇಂದ್ರ ಸರಕಾರ ಜನರಿಗೆ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ,ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಗಂಗಾಧರ, ಶರೀಫ್ ಕಂಠಿ, ಧೀರಾ ಕ್ರಾಸ್ತಾ, ಶಶಿಧರ ಎಂ.ಜೆ.ಉಪಸ್ಥಿತರಿದ್ದರು.














