ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಪಡೆದರು. 89.45 ಮೀಟರ್ ಎಸೆದು ಬೆಳ್ಳಿ ಪಡೆದು ಎರಡನೇ ಒಲಿಂಪಿಕ್ಸ್ ಪದಕ ಪಡೆದರು. ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚಿನ್ನದ ಪದಕ ಪಡೆದಿದ್ದರು.ಪಾಕಿಸ್ತಾನದ
ನದೀಮ್ ಅರ್ಷದ್ 92.97 ಮೀಟರ್ ದೂರ ಜಾವಲಿನ್ ಎಸೆದು ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದ ಸಾಧನೆ ಮಾಡಿದರು.
ಗ್ರೆನೆಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ಜಾವಲಿನ್ ಎಸೆದು ಕಂಚಿನ ಪದಕ ಪಡೆದರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಈ ಬಾರಿ 26 ವರ್ಷದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ಥ್ರೋ ಮಾಡುವ ಮೂಲಕ ಬೆಳ್ಳಿಗೆ ಪಡೆದರು. ಫೈನಲ್ನಲ್ಲಿ 12 ಸ್ಪರ್ಧಿಗಳ ಜತೆ ಹೋರಾಟ ನಡೆಸಿದರು.
ಒಲಿಂಪಿಕ್ ಕೂಟದ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕ ಗೆದ್ದ ಭಾರತದ ನಾಲ್ಕನೇ ಕ್ರೀಡಾಪಟು ಎಂಬ ಖ್ಯಾತಿಯೂ ಅವರದ್ದಾಯಿತು. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು (ಒಂದು ಬೆಳ್ಳಿ, ಒಂದು ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (ಒಂದು ಬೆಳ್ಳಿ, ಒಂದು ಕಂಚು) ಮತ್ತು ಶೂಟರ್ ಮನು ಭಾಕರ್ (ಎರಡು ಕಂಚು) ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ ಕ್ರೀಡಾಪಟು ಅವರಾಗಿದ್ದಾರೆ.