ಧರ್ಮಶಾಲಾ: ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.ಮಳೆಯಿಂದಾಗಿ 25 ಓವರ್ಗಳಿಗೆ ಇಳಿಸಲಾದ ಈ ಪಂದ್ಯದಲ್ಲಿ, ಭಾರತ ಟಾಸ್ ಗೆದ್ದು ಮೊದಲು
ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟಿಂಗ್ಗೆ ಬಂದ ಅಫ್ಘಾನಿಸ್ತಾನ ಬ್ಯಾಟರ್ಗಳ ಪೈಕಿ ಗುರ್ಬಾಜ್, ಕೇವಲ 51 ಎಸೆತಗಳಲ್ಲಿ 102 ರನ್ ಸಿಡಿಸಿ ಭರ್ಜರಿ ಶತಕ ಬಾರಿಸಿದರು. ಗುರ್ಬಾಜ್ ಬಳಿಕ ಅಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ಉಳಿದ ಬ್ಯಾಟರ್ಗಳು ಮುಗ್ಗರಿಸಿದ ಕಾರಣ ಕೇವಲ 194 ರನ್ಗೆ ಆಫ್ಘನ್ ಆಲೌಔಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಶುಭಮನ್ ಗಿಲ್ (84 ರನ್, ಅಜೇಯ), ನಾಯಕನ ಆಟ ಪ್ರದರ್ಶಿಸಿ ಗೆಲುವು ತಂದು ಕೊಟ್ಟರು. 3 ವಿಕೆಟ್ ಕಳೆದುಕೊಂಡ ಭಾರತ ಗೆಲುವಿನ ದಡ ಸೇರಿತು. ಇಶಾನ್ ಕಿಶನ್ (34),ಶ್ರೇಯಸ್ ಅಯ್ಯರ್ (12) ಮತ್ತು ಕೆ.ಎಲ್. ರಾಹುಲ್ (39) ರನ್ ಕೊಡುಗೆ ನೀಡಿದರು.














