ಸುಳ್ಯ:ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ
ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರ್ಸ್ ದಿನ ಪ್ರಯುಕ್ತ ಗುರುವಂದನೆ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಘದ ಗೌರವ ಅಧ್ಯಕ್ಷರಾದ ,ಬಾಲಕೃಷ್ಣ ಗೌಡ ಬೊಳ್ಳೂರು ನಿವೃತ್ತ ಪ್ರಾಂಶುಪಾಲರು ಕೆ.ವಿ.ಜಿ.ಪಿ ಸುಳ್ಯ, ಗೌರವ ಸಲಹೆಗಾರರಾದ
ಎನ್.ಅರ್ ಗಣೇಶ್ ನಿವೃತ್ತ ಪ್ರಾಂಶುಪಾಲರು .ಕೆ.ವಿ.ಜಿ.ಪಿ ಸುಳ್ಯ , ಚಂದ್ರಶೇಖರ್ ಸಿ ಬಿಲಿನೆಲೆ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಕೆ.ವಿ.ಜಿ.ಪಿ ಸುಳ್ಯ, ಡಾ. ಅನುರಾಧ ಕುರುಂಜಿ ಉಪಾನ್ಯಾಸಕರು, ಫಾಲಚಂದ್ರ ಎಲ್ಲೂರು ನಿವೃತ್ತ ಉಪಾನ್ಯಾಸಕರು .ಕೆ.ವಿ.ಜಿ.ಪಿ ಸುಳ್ಯ, ಸತ್ಯನಾರಾಯಣ ಪ್ರಸಾದ್ ನಿವೃತ್ತ ಉಪಾನ್ಯಾಸಕರು .ಕೆ.ವಿ.ಜಿ.ಪಿ ಸುಳ್ಯ ಇವರನ್ನು ಗೌರವಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಅಧ್ಯಕ್ಷರಾದ ರಕ್ಷಿತ್ ಬೊಳ್ಳೂರು, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು, ಯಶವಂತ, ವಿಕ್ಷೀತ್, ಗೌತಮ್, ಲೋಹಿತ್, ಅಂಶಲ್, ಪ್ರೀತಮ್ ನೀರ್ಪಾಡಿ, ಅಭಿಜ್ಞಾ ನೀರ್ಪಾಡಿ ಹಾಗೂ ಸುಧ ಗಣೇಶ್ ನೀರ್ಪಾಡಿ ಉಪಸ್ಥಿತರಿದ್ದರು